ಪೂರಕ ವಾತಾವರಣ
ಹಿಂದಿಯ ಸಾರ್ವಕಾಲಿಕ ಜನಪ್ರೀಯ ಸಿನೆಮಾ "ಶೋಲೆ" ತೆರೆಕಂಡು ಇಂದಿಗೆ ೫೦ ವರ್ಷಗಳಾದರೂ, ಅದರಲ್ಲಿಯ ವಿವಿಧ ಸನ್ನಿವೇಶಗಳು , ಡೈಲಾಗುಗಳು, ಹಾಡುಗಳು ಜನರ ಮನದಲ್ಲಿ ಇನ್ನೂ ಅಷ್ಟೇ ತಾಜಾ ಆಗಿವೆ. ಅದರಲ್ಲಿಯ ಒಂದು ಸನ್ನಿವೇಶ... ವೀರುವನ್ನು ಹಿಡಿದು ಕಟ್ಟಿಹಾಕಿದ ಗಬ್ಬರ್ ಸಿಂಗ್ , ವೀರುನ ಪ್ರೇಯಸಿ ಬಸಂತಿಗೆ ಹೇಳುತ್ತಾನೆ ನೀನು ಎಲ್ಲಿಯವರೆಗೆ ಹಾಡು ಹಾಡಿ ನೃತ್ಯ ಮಾಡುವಿಯೋ ಅಲ್ಲಿಯವರೆಗೆ ವೀರುಗೆ ಗುಂಡು ಹಾರಿಸುವುದಿಲ್ಲ ಎಂದು. "ಜಬತಕ್ ಹೈ ಜಾನ್s ಜಾನೇಜಹಾs ಮೈ ನಾಚುಂಗೀs"ಎಂಬ ಹಾಡು ಹಾಡುತ್ತ ಬಸಂತಿ ನೃತ್ಯಮಾಡುವಳು. ಅಸಹಾಯಕಳಾದ ಅವಳು, ಆ ಇಕ್ಕಟ್ಟಿನ ಸನ್ನಿವೇಶಕ್ಕೆ ಅನಿವಾರ್ಯವಾಗಿ ಹಾಗೆ ಮಾಡುವಳು. ಅದೇನೂ ಅವಳು ಖುಶಿಯಿಂದ ಹಾಡಿದ ಹಾಡಲ್ಲ ಮತ್ತು ಮಾಡಿದ ನೃತ್ಯವಲ್ಲ. ಒಂದು ವೇಳೆ ಬಸಂತಿಯಿಂದ ಒಳ್ಳೆಯ ಹಾಡು ಕೇಳುವ ಅಥವಾ ನೃತ್ಯ ನೋಡುವ ಇಚ್ಛೆ ಗಬ್ಬರ್ ಸಿಂಗ್ ಗೆ ಇದ್ದರೆ, ಅವನು ಅದಕ್ಕೆ ಅನುಗುಣವಾಗಿ ಪೂರಕ ವಾತಾವರಣ ಕಲ್ಪಿಸಿರುತ್ತಿದ್ದ. ಆದರೆ, ಅಲ್ಲಿ ಅವನ ಉದ್ದೇಶವೇ ಬೇರೆ ಆಗಿತ್ತು.ಅಲ್ಲವೇ? ತಾನು ಮತ್ತೊಮ್ಮೆ ಅಮೇರಿಕಾದ ಅಧ್ಯಕ್ಷನಾದರೆ, ರಷ್ಯ-ಯುಕ್ರೇನ್ ಯುದ್ಧವನ್ನು ಒಂದೇ ದಿನದಲ್ಲಿ ನಿಲ್ಲಿಸುತ್ತೇನೆ, ಅಮೇರಿಕಾವನ್ನು ಮತ್ತೊಮ್ಮೆ ಮಹಾನ್ ದೇಶವನ್ನಾಗಿ ಮಾಡುತ್ತೇನೆ ಎಂದೆಲ್ಲಾ ಹೇಳಿ ಎರಡನೇ ಬಾರಿ ಅಮೇರಿಕಾದ ಅಧ್ಯಕ್ಷರಾದ ಟ್ರಂಪ ಮಹಾಶಯ, ಯಾವ ಯುಧ್ಧವನ್ನೂ ನಿಲ್ಲಿಸಲಿಲ್ಲ. ಬದಲಾಗಿ ಜಾಗತಿಕ ಮಟ್ಟದಲ್ಲ...