ಪೋಸ್ಟ್‌ಗಳು

ಲೊಕೇಶನ್ ಕಳಿಸಿರಿ...

ಇಮೇಜ್
ಇಂದು ನನ್ನ ಬಾಲ್ಯದ ಗೆಳೆಯನೊಬ್ಬ ತನ್ನ ಮಗಳ ಮದುವೆಯ ಕರೆಯೋಲೆಯನ್ನು ವಾಟ್ಸ್ಆ್ಯಪನಲ್ಲಿ ಹಂಚಿಕೊಂಡು, ಮದುವೆ ಬೆಂಗಳೂರಿನಲ್ಲಿದ್ದು ಛತ್ರದ ಲೊಕೇಶನ್ ಕ್ಯುಆರ್ ಕೋಡನ್ನು ಡಿಜಿಟಲ್ ಕರೆಯೋಲೆ ಯಲ್ಲಿ ನಮೂದಿಸಿದೆ, ಮದುವೆಗೆ ತಪ್ಪದೇ ಬಂದು ವಧುವರರನ್ನು ಆಶೀರ್ವಾದಿಸಬೇಕೆಂದು ಆಗ್ರಹ ಪೂರ್ವಕವಾಗಿ ಫೋನಿನಲ್ಲಿ ಕರೆದ. ನನಗೆ, ಇಂದಿಗೆ ಮೂವತ್ತು ಮೂವತ್ತೈದು ವರ್ಷಗಳ ಹಿಂದಿನ ಮಾತೊಂದು ನೆನಪಾಯಿತು.  ಬಾಲ್ಯದ ಗೆಳೆಯರೆಲ್ಲ ಒಟ್ಟಿಗೆ ಓದಿ ಆಡಿ ಬೆಳೆದು ವಿವಿಧ ಉದ್ಯೋಗ/ವ್ಯವಸಾಯ ಅರಸಿ ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿ ಒಬ್ಬೊಬ್ಬರೇ ಮದುವೆ ಆಗುತ್ತಿದ್ದ ಸಮಯವದು. ಆದರೆ ಈ ಮಿತ್ರನಿಗೆ ಸ್ವಂತ ಊರಿನಲ್ಲಿಯೇ ಸರ್ಕಾರೀ ನೌಕರಿಸಿಕ್ಕು ಸಂಬಳದ ಜೊತೆಗೆ ಕೈತುಂಬಾ ಗಿಂಬಳವೂ ಬರುತ್ತಿದ್ದರೂ ಯಾಕೋ ಲಗ್ನದ ಯೋಗ ಮೂರ್ನಾಲ್ಕಾ ವರ್ಷವಾದರೂ ಬಂದಂತೆ ಕಾಣಲಿಲ್ಲ. ಈ ವಿಷಯವನ್ನು ಅರಿತ ನನ್ನ ಶ್ರೀಮತಿ, ತನ್ನ ಗೆಳತಿಯರಲ್ಲಿ ಒಬ್ಬಳಿಗೆ ಎಲ್ಲಿಯೂ ಯೋಗ್ಯ ವರ ಸಿಗದೇ ಅವಳ ತಂದೆ ಒದ್ದಾಡುತ್ತಿದ್ದ ವಿಚಾರ ತಿಳಿಸಿದಳು. ನಾನು ಉತ್ಸಾಹದಿಂದ ಧಾರವಾಡದ ಆ ಕಪಿ(ಕನ್ಯಾ ಪಿತೃ)ಗೆ ನನ್ನ ವರ ಮಿತ್ರನ ವಿಷಯ ತಿಳಿಸಿ ನಮ್ಮೂರಿನಲ್ಲಿನ ಅವನ ಮನೆಯ ಫೋನ್ (ಆಗಿನ್ನೂ  ಲ್ಯಾಂಡ್ ಲೈನ್ ಜಮಾನಾ) ನಂಬರ್ ನೀಡಿದೆ. ಮರುದಿನ ನನ್ನ ಶ್ರೀಮತಿ, ತನ್ನ ಗೆಳೆತಿಗೆ ಎಂಥಾ ವರ ಹೇಳಿದಿರಿ, ಅವಳ ತಂದೆಯವರು ಬಹಳ ಬೇಸರ ಮಾಡಿಕೊಂಡಿರುವದಾಗಿ ತಿಳಿಸಿದಳು. ನನ್ನ ಮಿ...

ಪರಾವಲಂಬಿ

ಚಿತ್ರ೧ ಚಿತ್ರ೨ ಮೊನ್ನೆ ಶ್ರೀ ವಾದಿರಾಜರು ಶ್ರೀಮದ್ ವ್ಯಾಸಮಹರ್ಷಿಗಳನ್ನು ಭಜಿಸಲು ರಚಿಸಿದ  ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ ... ಎಂಬ ಪದ ಕೇಳುತ್ತಿದ್ದೆ. ಅದರಲ್ಲಿ ಮುಂದೆ ಬರುವ ಒಂದು ಸಾಲು .... ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್‍ಸ್ವಾಮಿ ನೀನೆಂದು ತೋರಿಸಿದೆ... ಎಂದು ಬರುತ್ತದೆ. ಇಂದಿನ ಆಧುನಿಕತೆಯ ದಿನಗಳಲ್ಲಿ ಈ ಭಾಗದಲ್ಲಿ ಬರುವ  ಕ್ರಿಮಿಯಿಂದ ರಾಜ್ಯವಾಳಿಸಿದೆ ಎಂಬುದನ್ನು ಈ ಕೋವಿಡ್ ಬರುವುದಕ್ಕೂ ಮುನ್ನ ಮನವರಿಕೆ ಮಾಡಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸವಾಗಿತ್ತು. ಆದರೆ, ಈ ಶತಮಾನದ ಮಹಾಮಾರಿ ಕೋವಿಡ್ ನಿಂದಾಗಿ ಇಡೀ ಭೂಮಂಡಲವೇ ತಲ್ಲಣಿಸಿ ಹೋಯಿತು. ಇತ್ತೀಚಿನ ತಲೆಮಾರುಗಳು ಕಂಡೂ ಕೇಳರಿಯದ ಸಾವು-ನೋವು, ಕಷ್ಟ-ನಷ್ಟ, ದುಃಖ-ದುಮ್ಮಾನ, ಮಾನಸಿಕ ಖಿನ್ನತೆ-ಹತಾಶೆ, ವ್ಯಾಪಾರ-ವ್ಯವಹಾರಗಳ ಮಂದಗತಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಲಾಕ್ ಡೌನ್ ಮುಂತಾದ ಅನೇಕ ಋಣಾತ್ಮಕ ಪರಿಣಾಮಗಳನ್ನು ಜನ ಸಾಮಾನ್ಯರು ಅನುಭವಿಸಿದರು. ಜಾಗತಿಕವಾಗಿ ಆರ್ಥಿಕ ಪ್ರಗತಿಯಲ್ಲಿ ಕುಂಠಿತವಾಯಿತು. ಜಗತ್ತಿನ ಹಿಂದುಳಿದ-ಮುಂದುವರಿದ, ಬಡವ-ಶ್ರೀಮಂತ, ಹೀಗೆ ಭೇದವಿಲ್ಲದೇ ಎಲ್ಲ ಖಂಡಗಳ ಎಲ್ಲ ದೇಶಗಳ ಜನರು ಸಾವು ಬದುಕಿನೊಂದಿಗೆ ಹೋರಾಡುವಾಗ ಅವರನ್ನು ಹೇಗೆ ರಕ್ಷಿಸಬೇಕು ಎಂದು ತಿಳಿಯದೇ ದೇಶಗಳನ್ನು ಆಳುವವರು ಹತಾಶರಾದರು. ಇದೇ ನೋಡಿ ಆ ಕ್ರಿಮಿಯಿಂದ ರಾಜ್ಯವಾಳಿಸಿದೆ ಎಂಬ ಸಾಲುಗಳ ಅರ್ಥ ಎಂದು ಮನವರಿಕೆ ಆಯಿತು. ಇರ...