ಪೋಸ್ಟ್‌ಗಳು

ಅಗ್ನಿಯ ನ್ಯಾಯ

ಕಳೆದ ಡಿಸೆಂಬರ್ ನಲ್ಲಿ ನಾನು ಬರೆದ ವಾಟ್ಸ್ಯಾಪ್ ನ Good morning ಸಂದೇಶದ ವಿಶ್ಲೇಷಣೆಯ ಬ್ಲಾಗನ ನಂತರದಿಂದ ನನ್ನ ಅನೇಕ ಹಿತೈಷಿ/ಅಭಿಮಾನಿ/ಮಿತ್ರ/ಬಾಂಧವರಿಂದ Good morning ಸಂದೇಶಗಳು ವಾಟ್ಸ್ಯಾಪ್ ನಲ್ಲಿ ಪ್ರತಿದಿನ ಬೆಳಿಗ್ಗೆ ಸಾದರವಾಗುವುದು ಸ್ವಲ್ಪ ಜಾಸ್ತಿನೇ ಆಗಿದೆ. ನಾನು ಬೆಳಿಗ್ಗೆ ಏಳುವುದರಲ್ಲೇ ಅನೇಕ ಸಂದೇಶಗಳು ನನ್ನ ಓದಿಗಾಗಿ ಹಾದಿ ಕಾಯುತ್ತಿರುತ್ತವೆ. ನನ್ನ ಬೆಳಗಿನ ಕನಿಷ್ಟಪಕ್ಷ ಒಂದರ್ಧ ತಾಸು ಆ ಎಲ್ಲಾ ಸಂದೇಶಗಳನ್ನು ಓದಿ ಸೂಕ್ತವಾಗಿ ಪ್ರತಿಕ್ರಿಯಿಸುವುದಕ್ಕೆ ಮೀಸಲಾಗಿದೆ. ಅದಲ್ಲದೇ ನಾನು ಕೆಲವರಿಂದ ಇಂತಹ ಸಂದೇಶಗಳು ಬರುವ ಹಾದಿಯನ್ನೂ ಕಾಯುವೆ. ಕಾರಣ ಆ ಸಂದೇಶಗಳು ಸುಭಾಷಿತ ಮತ್ತು ಅದರ ಅರ್ಥದ ರೂಪದಲ್ಲಿರುತ್ತವೆ. ಕೆಲ ದಿನಗಳ ಹಿಂದೆ ನನ್ನ ಮಿತ್ರನಿಂದ ಬಂದ ಒಂದು ಸಂದೇಶ ಹೀಗಿತ್ತು. ದಾನಂ ಭೋಗೋ ನಾಶಃ ತಿಸ್ರೋ ಗತಯೋ ಭವನ್ತಿ ವಿತ್ತಸ್ಯಯೋ ನ ದದಾತಿ ನ ಭುಂಗ್ತೇ ತಸ್ಯಾ ತ್ರತೀಯಾಃ ಗತಿರ್ಭವತಿ । ಇದರರ್ಥ, ನಾವು ಗಳಿಸಿದ ಧನಕ್ಕೆ ಮೂರೇ ದಾರಿಗಳು. ಮೊದಲನೆಯದಾಗಿ ದಾನ ಮಾಡುವುದು ಎರಡನೆಯದು ತಾನೇ ಭೋಗ ಮಾಡುವುದು. ಇವೆರಡೂ ಮಾಡದಿದ್ದರೆ ದುಡ್ಡು ಮೂರನೆಯ ದಾರಿಗೆ ಹೋಗುತ್ತದೆ ಅಂದರೆ ನಾಶವಾಗುತ್ತದೆ. ಹೇಗೆ ಜೇನುಹುಳುಗಳು ಜೇನುತುಪ್ಪ ಸಂಗ್ರಹಿಸಿ ತಾವೂ ತಿನ್ನುವುದಿಲ್ಲ ಮತ್ತು ಇನ್ನೊಬ್ಬರಿಗೂ ಕೊಡುವುದಿಲ್ಲ. ಮೂರನೆಯದಾಗಿ ಏನಾಗುತ್ತದೆ, ಯಾರೋ ತೆಗೆದುಕೊಂಡು ಹೋಗುತ್ತಾರೆ ಎಂಬುದಾಗಿತ್ತು. ಕಾಕತಾಳೀಯವೋ ಎಂಬಂತೆ ಈ ಸಂ...