ಪೋಸ್ಟ್‌ಗಳು

ಜನವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮುದ್ದಣ್ಣನ ಖೋಲಿ...

ಸುಮಾರು ಮೂರು ದಶಕಗಳ ಹಿಂದಿನ ಮಾತು, ನನ್ನ ಡಾಕ್ಟರ್ ಅಣ್ಣನ ಮಗನ ಚೌಲ ಕರ್ಮ (ಜಾವಳ)ವನ್ನು ಆಚರಿಸಲು ನಿರ್ಧರಿಸಲಾಗಿದ್ದ ಮುನ್ನಾದಿನ ಪುಟ್ಟ ಮಗು ಅದೇಕೋ ಜ್ವರ ಬಂದು ಒಂದೇ ಸಮನೆ ಬಹಳ ಅಳುತ್ತಿತ್ತು. ಅಣ್ಣ ಅಲೋಪತಿ ಔಷಧಿಯ ಸಿರಪ್ ಎರಡು ಮೂರು ಸಲ ಹಾಕಿದರೂ ಮಗುವಿನ ಜ್ವರ ಹಾಗೂ ಅಳು ಎರಡೂ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಲಿಲ್ಲ. ವಿಶ್ವವಿದ್ಯಾಲಯದಿಂದ ನಿವೃತ್ತಿಯ ನಂತರ ಹೋಮಿಯೋಪಥಿ ಡಾಕ್ಟರ್ ಎಂದೇ ಪ್ರಸಿದ್ಧರಾಗಿದ್ದ ನಮ್ಮ ತಂದೆಯವರು ಇನ್ನೂ ಮಾತಾಡಲು ಬರದ ಮಗುವಿನ ಅಳುವ ರೀತಿಯನ್ನು (ದಯನೀಯ/ಕರುಣೆ ಬರುವ ಅಥವಾ ಕಿರಿಕಿರಿ ಉಂಟು ಮಾಡುವ/ ಸಿಟ್ಟಿಗೆಬ್ಬಿಸುವ) ಗಮನಿಸಿ ಅದಕ್ಕೆ ಅನುಗುಣವಾಗಿ ಎರಡು ಸಾಬುದಾಣಿ ಗಾತ್ರದ ಸಿಹಿ ಹೋಮಿಯೋಪಥಿ ಗುಳುಗೆಗಳನ್ನು ಮಗುವಿನ ನಾಲಿಗೆಯ ಮೇಲೆ ಇಟ್ಟರು. ಏನಾಶ್ಚರ್ಯ ದಿನವಿಡೀ ಜ್ವರದಿಂದ ಬಳಲುತ್ತಿದ್ದ ಕೂಸು ಅರ್ಧ ತಾಸಿನಲ್ಲಿ ಜ್ವರ ಇಳಿದು ಕುಲು ಕುಲು ನಗಲಾರಂಭಿಸಿತ್ತು. ಇಡೀ ದಿನ ಜ್ವರದಿಂದ ಬಳಲಿ ಅಳುತ್ತಿದ್ದ ಮಗುವಿನ ಚೌಲಕರ್ಮವನ್ನು ಮರುದಿನ ಹೇಗೆ ನೆರವೇರಿಸುವದೋ ಎಂದು ಚಿಂತೆಯಲ್ಲಿದ್ದ ನಮ್ಮ ಅತ್ತಿಗೆ ನಿಟ್ಟುಸಿರು ಬಿಟ್ಟರು. ಆದರೆ ಇತ್ತ ಮನೆಯಲ್ಲಿ ಸೇರಿದ ಇತರ ಮಮ್ಮಕ್ಕಳಲ್ಲಿ ಒಬ್ಬ ಮೊಮ್ಮಗಳು ಹಠಮಾರಿತನ ದಿಂದ ಸುಖಾಸುಮ್ಮನೆ ಅಳಲಾರಂಭಿಸಿದ್ದಳು. ಅವಳ ತಾಯಿ ಬೇಕಾದಷ್ಟು ಸಮಾಧಾನ ಪಡಿಸಲು ಪ್ರಯತ್ನಿಸಿರೂ ಪ್ರಯೋಜನವಾಗಿರಲಿಲ್ಲ. ನಮ್ಮ ಅತ್ತಿಗೆಯವರು ಹಠಮಾಡಿ ಅಳುತ್ತಿರುವ ಈ ಮಗುವಿಗೆ ಯಾವ ಹೋಮಿಯ...

ಹೀಗೊಂದು ಸಿನಿಮಾ ಕಥೆ...

ಬೆಂಗಳೂರಿನಲ್ಲಿರುವ ನನ್ನ ಮಗಳು ಕೆಲ ದಿನಗಳ ಹಿಂದಷ್ಟೇ, 'ಲಾ ಪತಾ ಲೇಡೀಸ್' ಎಂಬ ಒಳ್ಳೆಯ ಸಿನಿಮಾ ಬೆಳಗಾವಿಯ ಪ್ರತಿಷ್ಠಿತ ಸಿನಿಮಾ ಮಂದಿರದಲ್ಲಿ ಓಡುತ್ತಿದ್ದು ಅದನ್ನು ನೋಡಿ ಬನ್ನಿರಿ ಎಂದು ಎರಡು ಟಿಕೆಟ್ ಗಳ ಕ್ಯುಆರ್ ಕೋಡನ್ನು ಆನ್ ಲೈನ್ ನಲ್ಲಿ ಪಡೆದು ಅದರ ಪ್ರತಿಯನ್ನು ವಾಟ್ಸ್ಯಾಪ್ ನಲ್ಲಿ ಹಂಚಿಕೊಂಡಳು. ನಾವಿಬ್ಬರು ಬೇಗ ರಾತ್ರಿ ಊಟ ಮುಗಿಸಿ ಸೆಕೆಂಡ್ ಶೋ ಸಿನಿಮಾ ಶುರುವಾಗುವ ವೇಳೆಗೆ ಸರಿಯಾಗಿ ತೆರಳಿ ಕಾರನ್ನು ಪಾರ್ಕ್ ಮಾಡಿ ಸಿನಿಮಾ ಮಂದಿರದಲ್ಲಿ ದಾಖಲಾದೆವು. ಕ್ರತಕವಾಗಿಯಾದರೂ ನಯವಾಗಿ ಸ್ವಾಗತಿಸಿ ಕ್ಯುಆರ್ ಕೋಡನ್ನು ಸ್ಕ್ಯಾನ ಮಾಡಿದ ಸಿಬ್ಬಂದಿ,ನಾವು ಒಳಗೆ ಪ್ರವೇಶಿಸುವದಕ್ಕೂ ಮುನ್ನ ಸೆಕ್ಯೂರಿಟಿ ತಪಾಸಣೆಗೆ ಸಾಗುವಂತೆ ಸೂಚಿಸಿದಳು. ಆ ಪ್ರಕರಣದ ನಂತರ ಒಳಗೆ ಪ್ರವೇಶಿಸಿದಾಗ ಇಡೀ ಚಿತ್ರ ಮಂದಿರದಲ್ಲಿ ನಾವಿಬ್ಬರೇ ಪ್ರೇಕ್ಷಕರು.!!! 'ಲಾ ಪತಾ ಲೇಡೀಸ್' ಸಿನಿಮಾ ನೋಡಲು ಬಂದ ನಾವೇ ಎಲ್ಲಿ 'ಲಾ ಪತಾ' ಆದೇವೋ ಎಂಬ ಭೀತಿ ನನ್ನ ಶ್ರೀಮತಿಗಾದರೆ, ಅದಾವುದೋ ಹಿಂದಿ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಥಿಯೇಟರ್ ನ ಎಲ್ಲಾ ಟಿಕೆಟ್ ಖರೀದಿಸಿ ತಾನೋಬ್ಬನೇ ಕೂತು ಸಿನಿಮಾ ನೋಡಿದಂತೆ ನನಗನಿಸಿತು. ಅಂತೂ ಸಿನೆಮಾ ಸುರುವಾಗಿ ಐದು ನಿಮಿಷಗಳ ನಂತರ ನಮ್ಮಂತೆ ಇನ್ನೆರಡು ಮೂರು ಜೋಡಿಗಳು ಚಿತ್ರ ಮಂದಿರದಲ್ಲಿ  ನುಸುಳಿಕೊಂಡಾಗ ನನ್ನ ಶ್ರೀಮತಿಗೆ ಜೀವದಲ್ಲಿ ಜೀವ ಬಂದಂತಾಯಿತು.  ನಿಜ, ಭವ್ಯವಾದ ಮತ್ತು ಅತೀ ಸ್ವಚ್ಛವಾದ...