ನನ್ನ ಇಂಜಿನಿಯರಿಂಗ್ ಬ್ರ್ಯಾಂಚ...
ಕಲಬುರ್ಗಿಯಲ್ಲಿ ಹೊಳಿ ಹಬ್ಬದ ನಂತರ ಬರುವ ಶರಣಬಸವೇಶ್ವರ ಜಾತ್ರೆಯನ್ನು ಬಾಲ್ಯದ ದಿನಗಳಲ್ಲಿ ನಾವು ಬಹಳ ಉತ್ಸುಕತೆಯಿಂದ ಇದಿರು ನೋಡುತ್ತಿದ್ದೆವು. ಕಾರಣವಿಷ್ಟೆ, ಪ್ರತೀ ವರ್ಷ ರಂಗಪಂಚಮಿಯ ದಿನದಂದು ಅಪ್ಪನ ತೇರು ಎಳೆಯುವುದಕ್ಕೂ ಹದಿನೈದು ದಿನಗಳ ಮೊದಲೇ ಕಬ್ಬಿನ ಹಾಲಿನ ಅಂಗಡಿಗಳು ಬೀಳುತ್ತಿದ್ದವು. ಅಪ್ಪನ ತೇರು ಎಳೆದ ದಿನದಿಂದ ಮುಂದಿನ ಹದಿನೈದು ದಿನಗಳವರೆಗೆ ನಮಗೆ ಜಾತ್ರೆಯಲ್ಲಿ ವಿವಿಧ ಅಂಗಡಿಗಳಲ್ಲಿ ವಿಜಾಪುರದ ಚಿವಡಾ, ಗೋಕಾಕಿನ ಕರದಂಟು, ಗಾಣದ ಉಂಡಿ, ಬೆಂಡು ಬತ್ತಾಸುಗಳು ಸವಿಯಲು ಸಿಗುತ್ತಿದ್ದವು. ಮನೆಯಲ್ಲಿ ಅಪ್ಪನ ಜಾತ್ರೆಗೆಂದು ಸಿಗುತ್ತಿದ್ದ ಹತ್ತಿಪ್ಪತ್ತು ಪೈಸೆಯಲ್ಲಿ ಯಾವುದನ್ನು ತಿನ್ನುವುದು ಯಾವುದನ್ನು ಬಿಡುವುದು ಎಂದು ನಿರ್ಧರಿಸಲು ನಮಗೆ ಬಹಳ ಕಷ್ಟವಾಗುತ್ತಿರಲಿಲ್ಲ. ಆ ಮಾತಿಗೆ ದಶಕಗಳು ಕಳೆದಂತೆ, ಈಗಿನ ಹುಡುಗರು ಆ ಮಿಠಾಯಿಗಳನ್ನು ಸವಿಯಲು ಊರ ಜಾತ್ರೆಯ ಇದಿರು ನೋಡಬೇಕಾಗಿಲ್ಲ. ಕೇವಲ ಅವಷ್ಟೇ ಅಲ್ಲ ಇನ್ನೂ ನೂರಾರು ಬಗೆಯ ಸಿಹಿ ಖಾರ ತಿಂಡಿ ಖಾದ್ಯಗಳ ಮತ್ತು ವಿವಿಧ ಬಗೆಯ ಪೇಯಗಳ ಅಂಗಡಿ ಮಳಿಗೆಗಳು ಊರಿನ ಎಲ್ಲಾ ಗಲ್ಲಿ, ರಸ್ತೆಗಳಲ್ಲಿ ತಲೆಯತ್ತಿವೆ ಮತ್ತು ಈಗಿನ ಹುಡುಗರ ಕೈ, ಜೇಬು, ಫೋನ ತುಂಬಾ ಹಣ ಇರುತ್ತದೆ. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಇಂದಿನ ಹುಡುಗರಿಗೆ ಯಾವುದನ್ನು ತಿನ್ನಲಿ, ಯಾವುದನ್ನು ಬಿಡಲಿ, ಯಾವುದು ಒಳ್ಳೆಯ ಅಂಗಡಿ, ಎಲ್ಲಿ ರುಚಿಕರ ಮತ್ತು ಶುದ್ಧ ಖಾದ್ಯಗಳು ಲಭ್ಯ ಎಂದು ಆಯ್ಕೆ ಮಾಡುವುದೇ ಒಂದು ಸಮಸ್ಯೆಯಾಗಿದೆ. ಅದರಂತೆಯೇ, ಇಂದು ನಮ್ಮ ರಾಜ್ಯದಲ್ಲಿಯ ನೂರಾರು ಇಂಜಿನಿಯರಿಂಗ್ ಕಾಲೇಜುಗಳು ಮತ್ತೂ ಅವು ವಿದ್ಯಾರ್ಥಿಗಳಿಗೆ ಆಫರ್ ಮಾಡುವ ವಿವಿಧ ಬಗೆಯ ಬ್ರ್ಯಾಂಚ್ ಗಳ ಕಥೆಯೂ ವಿಭಿನ್ನವಾಗಿಲ್ಲ.
ಇತ್ತೀಚಿನವರೆಗೆ ನಾನು ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲನಾಗಿದ್ದಾಗ Engineering courses awareness program ಎಂಬ ಕಾರ್ಯಕ್ರಮದಲ್ಲಿ ಇಂದಿನ PUC ವಿದ್ಯಾರ್ಥಿಗಳಿಗೆ ಪ್ರಚಲಿತ ವಿವಿಧ ಇಂಜಿನೀಯರಿಂಗ್ ಬ್ರ್ಯಾಂಚಗಳನ್ನು ಪರಿಚಯಿಸುತ್ತಿದ್ದೆ. ಯಾವ ವಿಭಾಗವು ವಿದ್ಯಾರ್ಥಿಗಳ ಭವಿಷ್ಯದ ವಿವಿಧ ವೃತ್ತಿಗಳಿಗೆ ಯಾವ ಅವಕಾಶವನ್ನು ನೀಡುತ್ತದೆ ಎಂದು ವಿವರಿಸುತ್ತಿದ್ದೆ. ಮತ್ತು ಆ ವಿಭಾಗವು ಹೇಗೆ ಒಬ್ಬ ವಿದ್ಯಾರ್ಥಿ ತನ್ನ ಸಾಮರ್ಥ್ಯವನ್ನು ತಮ್ಮ ವೃತ್ತಿಜೀವನದ ಕನಸುಗಳೊಂದಿಗೆ ಹೊಂದಿಸಲು ಸಹಾಯ ಮಾಡಬಲ್ಲದು ಎಂಬುದನ್ನು ವಿಮರ್ಶಿಸಿ PUC ವಿದ್ಯಾರ್ಥಿಗಳು ತಮಗೆ ಸೂಕ್ತವಾದ ಬ್ರ್ಯಾಂಚ್ ಆಯ್ಕೆ ಮಾಡಿಕೊಳ್ಳುವ ಸ್ಪಷ್ಟ ಅರಿವು ಮೂಡಿಸುತ್ತಿದ್ದೆ. ಈ ತರಹದ ಯಾವ ಮಾರ್ಗದರ್ಶನಗಳ ಲಭ್ಯತೆ ಇಲ್ಲದೇ ೧೯೮೪ ರಲ್ಲಿ ಮೊದಲ ಬಾರಿ ಕರ್ನಾಟಕದಲ್ಲಿ ನಡೆದ CET ಪರೀಕ್ಷೆಯ ಮುಖಾಂತರ ಸೀಟು ಹಂಚಿಕೆಯಾದ ಇಂಜಿನಿಯರಿಂಗ್ ಬ್ಯಾಚ್ ಗೆ ಸೇರಿದ ವಿದ್ಯಾರ್ಥಿ ನಾನು.
ಪಿಯುಸಿ ಮುಗಿಸಿ ನಾನು ಎಂಜಿನಿಯರಿಂಗ್ ಸೀಟು ಗಿಟ್ಟಿಸುವಾಗ ನಮ್ಮೂರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್, ಮೆಕ್ಯಾನಿಕಲ್, ಇಲೇಕ್ಟ್ರಿಕಲ್ ಮತ್ತು ಇಲೇಕ್ಟ್ರಾನಿಕ್ಸ್ ಎಂಬ ನಾಲ್ಕು ಮುಖ್ಯ ಎಂಜಿನಿಯರಿಂಗ್ ವಿಭಾಗಗಳು ಪ್ರಚಲಿತದಲ್ಲಿದ್ದವು. ಅಲ್ಲದೇ, ಅದೇ ಹೊಸದಾಗಿ ಪ್ರಾರಂಭವಾದ ಕಂಪ್ಯೂಟರ್ ಸೈನ್ಸ್ ಮತ್ತು ಇಂಡಸ್ಟ್ರಿಯಲ್ ಪ್ರೊಡಕ್ಷನ್ ಹಾಗು ಆರ್ಕಿಟೆಕ್ಚರ್ ವಿಭಾಗಗಳೂ ಆಯ್ಕೆಗೆ ಲಭ್ಯವಿದ್ದವು.
ನಮ್ಮ ಮನೆಯಲ್ಲಿ ನನಗಿಂತ ಮೊದಲು ಯಾರೂ ಇಂಜಿನಿಯರಿಂಗ್ ಓದಿರಲಿಲ್ಲವಾದ್ದರಿಂದ ನಾನು ಯಾವ ವಿಭಾಗ ಆಯ್ಕೆ ಮಾಡಿಕೊಳ್ಳುವುದೆಂಬ ವಿಚಾರದಲ್ಲಿ ನನ್ನನ್ನೂ ಸೇರಿ, ಯಾರಿಗೂ ಅಷ್ಟು ಸ್ಪಷ್ಟ ಅರಿವಿರಲಿಲ್ಲ. ನಾನು SSLC ಇದ್ದಾಗ ನಮ್ಮ ತಂದೆಯವರು ಮನೆ ಕಟ್ಟಿಸುತ್ತಿದ್ದರು. ಮನೆಯ ಬುನಾದಿಗೆ ಭೂಮಿ ಅಗೆಯುವುದರಿಂದ ಪ್ರಾರಂಭಿಸಿ ಕಲ್ಲಿನ ಪಾಯಾ ಹಾಕುವುದು ನಂತರ ಇಟ್ಟಿಗೆಯ ಗೋಡೆಗಳ ನಿರ್ಮಾಣ, ಕಟ್ಟಿಗೆಯ ಬಾಗಿಲು ಕಿಟಕಿಗಳ ನಿರ್ಮಾಣದ ಕಾರ್ಪೆಂಟರ್ ಕೆಲಸ, ಅದರಂತೆ ಕಬ್ಬಿಣದ ಸರಳುಗಳ ಬಾರ ಬೆಂಡಿಂಗ, ಸಿಮೆಂಟ್ ಕಾಂಕ್ರೀಟ್ ನ ಛತ್ತು ಹಾಕುವುದು, ಮನೆಯ ಇಲೆಕ್ಟ್ರಿಕಲ್ ವಾಯರಿಂಗ, ಪ್ಲಂಬಿಂಗ, ಗೋಡೆಗಳ ಪೇಂಟಿಂಗ್ ಹೀಗೆ ಪ್ರತಿಯೊಂದು ಕೆಲಸಗಳನ್ನು ಬಹಳ ಕುತೂಹಲದಿಂದ ನೋಡುತ್ತಾ ನಾನು ದಿನದ ಬಹಳಷ್ಟು ಸಮಯವನ್ನು ಮನೆಕಟ್ಟುವ ಸೈಟನಲ್ಲೇ ಕಳೆಯುತ್ತಿದ್ದೆ. ಇದರ ಪರಿಣಾಮವಾಗಿ SSLC ಪರೀಕ್ಷೆಯಲ್ಲಿ ಅಂತೂ ಇಂತೂ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದೆನೇ ಹೊರತು ಹೆಚ್ಚಿನ ಅಂಕ ಪಡೆದಿರಲಿಲ್ಲ. ಮನೆಕಟ್ಟುವಲ್ಲಿ ತೋರಿದ ನನ್ನ ಆಸಕ್ತಿಯನ್ನು ಗಮನಿಸಿದ್ದ ನನ್ನಕ್ಕ, ನಾನು ಸಿವಿಲ್ ಇಂಜಿನಿಯರಿಂಗ್ ಯಾಕೆ ಓದಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿಳು. ಇನ್ನು, ಮನೆಗೆ ಬಂದ ನನ್ನ ಅಣ್ಣನ ಮೆಡಿಕಲ್ ಸಹಪಾಠಿ ಡಾಕ್ಟರು, ನಾನು ನಮ್ಮ ತಂದೆಯವರ ಮೋಪೆಡನ ಸ್ಪಾರ್ಕಪ್ಲಗ್ ಕ್ಲೀನ್ ಮಾಡುವುದನ್ನು ನೋಡಿ ಜಯಂತಾ ನೀನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡು, ನನ್ನ ಕ್ಲಿನಿಕ್ ಪಕ್ಕ ಸ್ಕೂಟರ್ ರಿಪೇರಿಯ ಮೆಕ್ಯಾನಿಕ್ ಶಾಪ್ ತೆಗೆಯಬಹುದೆಂಬ ಸಲಹೆ ನೀಡಿದ. ನಾನು ಮನೆಯಲ್ಲಿದ್ದ ಮಿಕ್ಸಿ, ಇಸ್ತ್ರೀ ಮುಂತಾದವು ಕೆಟ್ಟಾಗ ಉತ್ಸಾಹದಿಂದ ರಿಪೇರಿ ಮಾಡುವುದರಿಂದ ನಾನು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಮಾಡಿದರೆ ಒಳ್ಳೆಯದೆಂದು ನಮ್ಮಮ್ಮ ಅಂದಳು. ಬೆಂಗಳೂರಿನ ನಮ್ಮ ತಂದೆಯ ಮಿತ್ರರೊಬ್ಬರು ಜಯಂತನಿಗೆ ಕಂಪ್ಯೂಟರ್ ಸೈನ್ಸ್ ಬ್ರ್ಯಾಂಚ್ ಆಯ್ಕೆ ಮಾಡಿಕೊಳ್ಳಲು ಹೇಳಿ, ಏನಿಲ್ಲವೆಂದರೂ ಡಿಗ್ರಿಯ ನಂತರ ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ನೌಕರಿ ಗ್ಯಾರಂಟಿಯಾಗಿ ಸಿಗುತ್ತದೆ ಎಂದಿದ್ದರಂತೆ.
ಮನೆಯ ಐದನೇಯ ಮತ್ತು ಕೊನೆಯ ಮಗನಾಗಿದ್ದ ನಾನು ಯಾವಾಗಲೂ ಗೆಳೆಯರು-ಆಟಪಾಟಗಳಲ್ಲಿ ಜಾಸ್ತಿ ಸಮಯ ಕಳೆಯುತ್ತಿದ್ದು ಓದು ಅಭ್ಯಾಸದಲ್ಲಿ ಇತರ ಒಡಹುಟ್ಟಿದವರಷ್ಟು ಮುಂದಿಲ್ಲ ಎಂಬ ಖ್ಯಾತಿ ನಮ್ಮ ಮನೆಯಲ್ಲಿತ್ತು. ಆದರೆ ಮನೆಮಂದಿಯ ಆಶ್ಚರ್ಯಕ್ಕೆ ನನ್ನ PUC ಮಾರ್ಕ್ಸ್ ಮತ್ತು CET ನಂಬರು ಉತ್ತಮವಾಗಿ ಬಂದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು ಮತ್ತು ಇತರರ ಬಾಯಿ ಮುಚ್ಚಿಸಿತ್ತು. ಹೀಗಾಗಿ, ಯಾವುದೇ ಕಾರಣಕ್ಕೂ ಅದೇ ಹೊಸದಾಗಿ ಪ್ರಾರಂಭವಾದ ಇಂಜಿನಿಯರಿಂಗ್ ವಿಭಾಗದ ಆಯ್ಕೆ ಮಾಡಬಾರದು ಎಂಬ ನಿರ್ಧಾರಕ್ಕೆ ನಾನು ಬಂದಿದ್ದೆ. ಯಾಕೆಂದರೆ ಆ ಬ್ರಾಂಚಗಳಲ್ಲಿ ಸುಸಜ್ಜಿತ ಲ್ಯಾಬಗಳಾಗಲಿ ಮತ್ತು ಹಿರಿಯ ಅನುಭವಿ ಪ್ರಾಧ್ಯಾಪಕರಾಗಲಿ ಇರಲಿಲ್ಲ. ಆದರೆ, ಸ್ಥಾಪಿತ ಇತರ ನಾಲ್ಕು ವಿಭಾಗಗಳಲ್ಲಿ ಯಾವುದು ನನ್ನ ಆಯ್ಕೆ ಎಂಬ ಸ್ಪಷ್ಟ ಅರಿವು ನನಗಿರಲಿಲ್ಲ.
ನಮ್ಮ ಪರಿಚಯದವರ ಕೆಲವು ಮಕ್ಕಳು ಆಗಲೇ ಇಂಜಿನಿಯರಿಂಗ್ ಓದುತ್ತಿದ್ದರಿಂದ ಅವರ ಅಭಿಪ್ರಾಯ ಕೇಳಿ ಬಾ ಆ ಮೇಲೆ ನಿರ್ಧರಿಸಿದರಾಯಿತು ಎಂದು ನಮ್ಮ ತಂದೆಯವರು ಸೂಚಿಸಿದರು.
ಅದರಂತೆ, ತಂದೆಯವರ ಡಾಕ್ಟರ್ ಮಿತ್ರರೊಬ್ಬರ ಮಗಳನ್ನು ನಾನು ಮೊದಲಿಗೆ ಭೇಟಿಯಾದೆ. ಅವಳು Electronics and Communication (E&C) ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು. ಅವಳ ಅಭಿಪ್ರಾಯದಂತೆ E&C ತುಂಬಾ ಒಣ ಮತ್ತು ಕಷ್ಟಕರ ಬ್ರ್ಯಾಂಚ್. ವಿಭಾಗದ ಹಿರಿಯ ಪ್ರಾಧ್ಯಾಪಕರು ಒಳ್ಳೆಯ ಜ್ಞಾನಿಗಳು ಆದರೆ ವಿದ್ಯಾರ್ಥಿಗಳಿಗೆ ತಿಳಿಯುವಂತೆ ಕಲಿಸಲು ಬರುವುದಿಲ್ಲ. ಅಲ್ಲದೇ, ಕೆಲವು ಯುವ ಪ್ರೊಫೆಸರಗಳು ಒಂಥರಾ ಕನ್ಫ್ಯೂಷನ್ ಮತ್ತು ಟೆನ್ಶನ್ ನಲ್ಲಿ ಇರುತ್ತಾರೆ ಮತ್ತು ಸಾಮಾನ್ಯವಾಗಿ ಅವರು ವಿದ್ಯಾರ್ಥಿಗಳೊಂದಿಗೆ ಬಹಳ ಖಾರವಾಗಿ ನಡೆದುಕೊಳ್ಳುತ್ತಾರೆ. ತಾನು ಯಾಕಾದ್ರೂ ಈ ವಿಭಾಗವನ್ನು ಆಯ್ಕೆ ಮಾಡಿಕೊಂಡೆನೋ ಎಂದು ಅನಿಸುತ್ತದೆ, ಹೀಗಾಗಿ ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ನಾನು ಸುತಾರಾಂ ನಿನಗೆ ಶಿಫಾರಸು ಮಾಡುವುದಿಲ್ಲ ಎಂದು ತಿಳಿಸಿದಳು.
ಸರ್ ಎಮ್ ವಿಶ್ವೇಶ್ವರಯ್ಯ ಭಾರತ ಕಂಡ ಒಬ್ಬ ಶ್ರೇಷ್ಠ ಸಿವಿಲ್ ಇಂಜಿನಿಯರ್ ಎಂದು ಅರಿತಿದ್ದರೂ, ನಾನು SSLC ಪರೀಕ್ಷೆಯಲ್ಲಿ ನಮ್ಮ ಮನೆಯಲ್ಲಿಯೇ ಎಲ್ಲರಿಗಿಂತ ಕಡಿಮೆ ಅಂಕಪಡೆದವ ಎಂಬ ನನ್ನ ಕುಖ್ಯಾತಿಗೆ ಈ ಸಿವಿಲ್ ಇಂಜಿನಿಯರಿಂಗೇ ಮೂಲಕಾರಣ ಎಂಬ ಭಾವನೆ ನನ್ನ ಮನಸ್ಸಿನ ಒಂದು ಮೂಲೆಯಲ್ಲಿ ಮನೆಮಾಡಿತ್ತು. ಹಾಗಾಗಿ ಸಿವಿಲ್ ಇಂಜಿನಿಯರಿಂಗ್ ಬಗ್ಗೆ ನನಗೆ ಒಲವೇನೂ ಉಳಿದಿರಲಿಲ್ಲ. ಆದರೂ ತಂದೆಯವರ ಆದೇಶದಂತೆ ನಾನು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಬಗ್ಗೆ ಅಭಿಪ್ರಾಯ ಕೇಳಲು ಅದೇ ತಾನೆ ಸಿವಿಲ್ ಇಂಜಿನಿಯರಿಂಗ್ ಡಿಗ್ರಿ ಮುಗಿಸಿ ಯಾವ ಕೆಲಸವಿಲ್ಲದೇ, ಸರ್ಕಾರಿ ನೌಕರಿಗಾಗಿ ಅಲೆದಾಡುತ್ತಿದ್ದ ನನ್ನ ಹಿರಿಯಣ್ಣನ ಮಿತ್ರನೊಬ್ಬನನ್ನು ಭೇಟಿ ಮಾಡಿದೆ. ಹತಾಶೆ ಮತ್ತು ಭ್ರಮನಿರಸನದಲ್ಲಿದ್ದ ಅವನ ಮಾತಿನಿಂದ ಸಿವಿಲ್ ಇಂಜಿನಿಯರಿಂಗ್ ನನ್ನ ಸಂಭಾವ್ಯ ಆಯ್ಕೆಯ ಪಟ್ಟಿಯಿಂದ ಮಾಯವಾಯಿತು.
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಯಾವ ವಿದ್ಯಾರ್ಥಿಯ ಪರಿಚಯ ಇರದ ಕಾರಣ ತಂದೆಯವರ ಸೂಚನೆಯಂತೆ ನೇರವಾಗಿ ಆ ವಿಭಾಗದ ಪ್ರಾಧ್ಯಾಪಕರನ್ನು ಭೇಟಿಯಾಗಲು ಮೊದಲ ಬಾರಿ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗಕ್ಕೆ ಹೆದರುತ್ತಾ ಕಾಲಿಟ್ಟೆ. ತಕ್ಷಣ, ಹಲೋs ಯಾರು ನೀನು, ಏನು ಬೇಕಿತ್ತು ಎಂಬ ಯಮ ಗರ್ಜನೆಯೊಂದಿಗೆ ಅಜಾನುಬಾಹು ವ್ಯಕ್ತಿಯೊಬ್ಬ ಪ್ರತ್ಯಕ್ಷನಾದ. ತಕ್ಷಣ ನನಗೆ ಮೈಯಲ್ಲಿ ೪೪೦ ವೋಲ್ಟೇಜ್ ವಿದ್ಯುತ್ ಪ್ರವಾಹದ ಅನುಭವವಾಯಿತು. ಕೊಂಚ ಸಾವರಿಸಿಕೊಂಡು ನಾನು ಬಂದ ವಿಷಯವನ್ನು ಆ ವ್ಯಕ್ತಿಗೆ ತಿಳಿಸಿದೆ. ಹಲೋs ಇದು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗ, ಇಲ್ಲಿ ಹಂದಿ ನುಗ್ಗಿದಂತೆ ಒಳಬರುವಹಾಗಿಲ್ಲ, ಮೊದಲು ಯಾವ ಪ್ರೊಫೆಸರನ್ನು ಭೇಟಿಯಾಗಬೇಕಿದೆಯೋ ಅವರ ಲಭ್ಯತೆ ಮತ್ತು ಬಿಡುವಿನ ಸಮಯ ತಿಳಿದು ಪರವಾನಗಿ ಪಡೆದು ಬರತಕ್ಕದ್ದು. ನೀನು ಹಾಗೆಯೇ ಬೇಕೆಂದಾಗ ಒಳಬರಲು ಇದು ಸಿನಿಮಾ ಮಂದಿರವಲ್ಲ. ಸಧ್ಯ ಡಿಪಾರ್ಟ್ಮೆಂಟನಲ್ಲಿ ಯಾವ ಪ್ರೊಫೆಸರ್ ಅಭ್ಯವಿಲ್ಲ, ನಾಳೆ ಬಾ ಎಂದು ಆ ವ್ಯಕ್ತಿ ಹೇಳಿದ. ಆಗ ನನಗೆ ಎರಡು ವಿಷಯಗಳು ನಿಶ್ಟಿತವಾದವು. ಒಂದು, ಆ ವ್ಯಕ್ತಿ ಪ್ರೊಫೆಸರ್ ಅಲ್ಲ ಮತ್ತು ಇನ್ನೊಂದು, ನಾನು ಈ ಜನ್ಮದಲ್ಲಲ್ಲ, ಮುಂದಿನ ಜನ್ಮದಲ್ಲೂ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಆಯ್ಕೆ ಮಾಡುವುದಿಲ್ಲವೆಂದು.!!
ಈ ನಡುವೆ ನಾನರಿತಿದ್ದೇನೆಂದರೆ ನನ್ನ ಬಹಳಷ್ಟು ಮಿತ್ರರು E&C ಬ್ರ್ಯಾಂಚನ್ನು ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ನನಗೂ ಅವರೊಟ್ಟಿಗೆನೇ ಇಂಜಿನಿಯರಿಂಗ್ ಕಲಿಯಬೇಕೆಂಬ ಆಸೆಯಿತ್ತು. ಆದರೆ E&C ಬ್ರ್ಯಾಂಚನ್ನು ಓದುತ್ತಿದ್ದ ಆ ಅಕ್ಕನ ಅಭಿಪ್ರಾಯ ಅಷ್ಟೇನು ಸಕಾರಾತ್ಮಕ ಆಗಿರಲಿಲ್ಲವಾದಕಾರಣ ನಾನು ಒಂದು ತರಹದ ದುವಿಧಾದಲ್ಲಿದ್ದೆ.
ನಮ್ಮ ಪರಿಚಯದವರ ಮಗನೊಬ್ಬ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿದ್ದ. ನಾನು ಅವನನ್ನು ಭೇಟಿ ಮಾಡಿ ಅಣ್ಣಾ, ಇಲೇಕ್ಟ್ರಾನಿಕ್ಸ್ ಬ್ರ್ಯಾಂಚ್ ಗೆ ಹೋಲಿಸಿದರೆ ಮೆಕ್ಯಾನಿಕಲ್ ಬ್ರ್ಯಾಂಚ್ ಹೇಗಿದೆ ಎಂದು ಕೇಳಿದೆ. ಅದಕ್ಕೆ ಅವನು ನೋಡು ಜಯಂತಾ, ಇಲೇಕ್ಟ್ರಾನಿಕ್ಸ್ ನ್ಯಾಗ ಇಲೇಕ್ಟ್ರಾನಂತೂ ಬಿಡು, ಒಂದು ಅಣುವನ್ನೂ ನೋಡಲಿಕ್ಕೆ ಸಿಗುವುದಿಲ್ಲ. ಎಲ್ಲಾನೂ ಊಹಿಸಬೇಕು. ಅದೇನೋ ಬೆಳಕಿಗೆ ದ್ವಂದ್ವ ಸ್ವಭಾವ ಅದ ಅಂತ. ಕೆಲವೊಮ್ಮೆ ಬೆಳಕು ಕಣ (ಫೋಟಾನ್)ದಂಗ ಮತ್ತ ಕೆಲವೊಮ್ಮೆ ತರಂಗದ ಹಂಗ ವರ್ತಸ್ತದಂತ ಹೇಳಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗದಾಗ ಕಲಸ್ತಾರಂತ. ಅಂದ್ರ, ಆ ಇಲೆಕ್ಟ್ರಾನು ಭಾಳ ಮನಸೂಕರಾಯ ಇದ್ದಂಗಾತು. ಹಿಂಗಾದ್ರ ನಾವು ಹೆಂಗ ತಿಳ್ಕೊಂಡು ಅದರಿಂದ ಕೆಲಸಾ ತೊಗೊಳೋದು. ಅದು ಬಿಡು, ಅವೇನೋ ಇಲೇಕ್ಟ್ರಾನುಗಳು s,p,d,f ಅನ್ನೋ ವೃತ್ತದಾಗ ಕೇಂದ್ರದ ಸುತ್ತ ಗಿರಕಿ ಹೊಡಿತಾವಂತ. ನಾ ಕೇಳ್ತೀನಿ, ಅವುಕ್ಕ ಹಂಗ ಯದ್ವಾ ತದ್ವಾ ತಿರಗಲಿಕ್ಕೆ ಏನ್ ಧಾಡಿ? ಸೀದಾ a,b,c,d ಅನ್ನೋ ವೃತ್ತದಾಗ ಯಾಕ ತಿರಗಬಾರದು ಅವು? ನಮ್ಮ ಮೆಕ್ಯಾನಿಕಲ್ ಎಂಜಿನಿಯರಿಂಗದಾಗ ನೋಡು ವಸ್ತುವಿನ ಚಲನಾ ನಿಯಮಗಳು ಎಷ್ಟು ನೇರ ಮತ್ತ ಸ್ಪಷ್ಟ ಅವ, ಯಾವ ಕನ್ಫ್ಯೂಷನ್ ಇಲ್ಲ. ಅಷ್ಟೇ ಅಲ್ಲ, ನಾವು ಯಾವ ಯಂತ್ರದ ಬಗ್ಗೆ ಮಾತಾಡಿದ್ರೂ ಅದನ್ನ ಪ್ರತ್ಯಕ್ಷ ನೋಡಬಹುದು. Seeing is Believing ಅಲ್ಲೇನು. ನೋಡಪಾ, ನಮ್ಮ ಮೆಕ್ಯಾನಿಕಲ್ ಬ್ರ್ಯಾಂಚನ್ನ ವಿವಿಧ ಕೈಗಾರಿಕೆಗಳಲ್ಲಿ ಎವರ್ ಗ್ರೀನ್ ಬ್ರ್ಯಾಂಚ್ ಅಂತಾರ. ಮನಷ್ಯಾಗ ಎಲ್ಲಿ ತನಕಾ ರೋಟಿ ಕಪಡಾ ಮಕಾನಿನ ಅವಶ್ಯಕತಾ ಇರುತದೋ ಅಲ್ಲಿತನಾ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಡಿತದ. ಟಾಟಾ, ಬಿರ್ಲಾ ಹೆಸರು ಕೇಳಿಯಲ್ಲಾ, ಅವರೆಲ್ಲಾ ನಡಸೋದು ನಮ್ಮ ಮೆಕ್ಯಾನಿಕಲ್ ಎಂಜಿನಿಯರಿಂಗ್ ಇಂಡಸ್ಟ್ರಿಗಳನ್ನೇ. ಇನ್ನ, ನಮ್ಮ ವಿಭಾಗದಾಗ ಒಬ್ಬಿಬ್ಬರನ್ನ ಬಿಟ್ರ ಎಲ್ಲಾ ಪ್ರೊಫೆಸರಗಳು ಭಾಳ ಒಳ್ಳೆಯವರು. ಛಂದಾಗಿ ಕ್ಲಾಸು ತೊಗೊಳೋರು ಯಾರೂ ಕ್ಲಾಸನ್ಯಾಗ ಅಟೆಂಡೆನ್ಸ್ ತೊಗೊಳೋದಿಲ್ಲ ಮತ್ತ ಅಟೆಂಡೆನ್ಸ್ ತೊಗೊಳೋರು ಭಾಳ ಕ್ಲಾಸು ತೊಗೊಳೋದಿಲ್ಲ. ಇನ್ನೂ ಒಬ್ಬಿಬ್ಬರು ಪ್ರೊಫೆಸರಗೋಳು ಆ ಎರಡೂ ಕೆಲಸಾ ಮಾಡೋದಿಲ್ಲ. ಆದ್ರ ಹೆದರಬೇಕಾಗಿಲ್ಲ, ಪರೀಕ್ಷಾದಾಗ ಮಾತ್ರ ಅವರು ಭರಪೂರ್ ಮಾರ್ಕ್ಸ್ ಕೊಡತಾರ. ಅದಕ್ಕ ನಾವು ನಮ್ಮ ಬ್ರ್ಯಾಂಚಗೆ ಹೇಳೋದು ರಾಯಲ್ ಮೆಕ್ಯಾನಿಕಲ್ ಅಂತ. ಜಯಂತಾ, ಒಂದು ಮಾತು ನೆನಪಿಟ್ಗೊ, ನಮ್ಮ ಮೆಕ್ಯಾನಿಕಲ್ ಇಂಜಿನಿಯರಿಂಗ್ ಗಂಡಸರ ಬ್ರ್ಯಾಂಚ್ ಮತ್ತ ಆ ಇಲೇಕ್ಟ್ರಾನಿಕ್ಸ್ ಅಂದ್ರ ಹುಡಗ್ಯಾರ ಬ್ರ್ಯಾಂಚ್. ಅಣ್ಣನ ಆ ಕಡೀ ಮಾತು ೧೮ ವರ್ಷದ ತರುಣ ಹುಡುಗನಿಗೆ ತನ್ನ ಬ್ರ್ಯಾಂಚ್ ನಿರ್ಧರಿಸಲು ಸಾಕಾಗಿತ್ತು. ನನ್ನ ನಿರ್ಧಾರ ಗಟ್ಟಿಯಾಯಿತು. ನಾನು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವನ್ನು ಆಯ್ಕೆ ಮಾಡಿಕೊಂಡೆ. ಆದರೆ ಮೊದಲನೆಯ ಎರಡು ವರ್ಷ ನಾನು ಸಿವಿಲ್ ಮತ್ತು ಇಲೆಕ್ಟ್ರಿಕಲ್ ವಿಭಾಗಗಳ ಕೆಲವು ವಿಷಯಗಳನ್ನು ನನ್ನ ನೆಚ್ಚಿನ ಮೆಕ್ಯಾನಿಕಲ್ ಬ್ರ್ಯಾಂಚನ ಪಠ್ಯದಲ್ಲಿ ಕಲಿತೆ. ಅಷ್ಟೇ ಅಲ್ಲ, ಮುಂದೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಇಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ನ ಕೆಲವು ವಿಷಯಗಳನ್ನು ಕಲಿತು ಮೆಕ್ಯಾನಿಕಲ್ ಬ್ರ್ಯಾಂಚನ ವಿದ್ಯಾರ್ಥಿಗಳಿಗೆ ಅವನ್ನು ಕಲಿಸಿದ್ದಲ್ಲದೇ ಆ ವಿಷಯದ ಅನೇಕ ವಿದ್ಯಾರ್ಥಿ ಪ್ರಾಜೆಕ್ಟಗಳ ಮಾರ್ಗದರ್ಶನ ಕೂಡಾ ಮಾಡಿದೆ.
The sweetness of fruit depends more on the fertility of land and water than on which branch of the tree it is.
ಒಬ್ಬ ಯಶಸ್ವಿ ಇಂಜಿನಿಯರ್ ರೂಪಗೊಳ್ಳಲು ಕೇವಲ ಒಂದು ಬ್ರ್ಯಾಂಚನ ಜ್ಞಾನ ಮತ್ತು ಕೌಶಲ್ಯ ಮಾತ್ರ ಸಾಲದು, ಜೊತೆಗೆ ಇತರ ವಿಭಾಗಗಳ ತಾಂತ್ರಿಕ ವಿಷಯಗಳ ಕನಿಷ್ಠ ಜ್ಞಾನ ಹೊಂದುವುದು ಅತೀ ಅವಶ್ಯಕ ಎಂದು ನನ್ನ ಮುವತೈದು ವರ್ಷಗಳ ಎಂಜಿನಿಯರಿಂಗ್ ಪ್ರಾಧ್ಯಾಪಕ ವೃತ್ತಿಯ ಅನುಭವದಿಂದ ಇಂದು ನಾನು ಗಂಟಾಘೋಷವಾಗಿ ಹೇಳಬಹುದು.
ಡಾ. ಜಯಂತ ಕಿತ್ತೂರ
ಅತೀ ಉತ್ತಮ ಲೇಖನ ಸರ್
ಪ್ರತ್ಯುತ್ತರಅಳಿಸಿBeautifully written. Local to global. Your writing style is simple and can connect to all.👍💐
ಪ್ರತ್ಯುತ್ತರಅಳಿಸಿಅತೀ ಉತ್ತಮ ಲೇಖನ ಸರ್
ಪ್ರತ್ಯುತ್ತರಅಳಿಸಿSooper Dr Jayant…my experience also is more or less similar to yours…you’ve rightly pointed out the confusion of a student choosing an Engg course…very well written…keep it up !
ಪ್ರತ್ಯುತ್ತರಅಳಿಸಿi do remember you saying electrons are imaginary things..cant see..why go after them
ಪ್ರತ್ಯುತ್ತರಅಳಿಸಿ..at least mechanical branch has bicycles ( real things) to show ..1984
ದಯವಿಟ್ಟು ಇನ್ನೂ ಸ್ವಲ್ಪ ದೀರ್ಘವಾಗಿ ವಿವರಿಸಿ ಸರ್. ಎರಡನೇ ಭಾಗ ಶೀಘ್ರ ಬರಲಿ ಸರ್.🙏🏻
ಪ್ರತ್ಯುತ್ತರಅಳಿಸಿYou have subtly written about the necessity of counseling and career guidance.You have also guided scores of Young engineer graduates with guidance and being chief of HR campus selection by Industrial Giants.
ಪ್ರತ್ಯುತ್ತರಅಳಿಸಿYou have made such a wonderful name as teacher ,Academician and adminitrator(Principal of prestigious Gogte Engineering College ), a proud son of Kittur family.
May you inspire many young Engineers to achieve great things as professional.
Superb writeup.
ಪ್ರತ್ಯುತ್ತರಅಳಿಸಿಹಾಸ್ಯಮಯವಾಗಿದ್ದರೂ ಅನುಭವವನ್ನು ಮಾರ್ಮಿಕವಾಗಿ ಬರೆದಿದ್ದೀರಿ. ಸರ್ ಹೀಗೆ ಲೇಖನ ಸಾಗುತ್ತಿರಲಿ.
ಪ್ರತ್ಯುತ್ತರಅಳಿಸಿRoyal Mechanical Engineering ಸರಿಯಾಗಿ ಹೇಳಿದ್ದು... ಮೊದಲು Civil Mechanical Engineering ಇದ್ದಷ್ಟು ಬೇಡಿಕೆ ಬೇರೆ ಬ್ರಾಂಚಿಗೆ ಇದ್ದಿಲ್ಲ...
ಪ್ರತ್ಯುತ್ತರಅಳಿಸಿಹತ್ತು ಹಲವಾರು ಜನರಿಗೆ ಕೇಳಿ ಸ್ವಂತದ್ದು ನಿರ್ಣಯ ಉತ್ತಮ ನಿರ್ಣಯ... ಸುಂದರ ವಿಸ್ತೃತ ವಿವರಣಾತ್ಮಕ ಬರಹ
Sripad Algudkar ✍️
ತುಂಬಾ ಚೆನ್ನಾಗಿದೆ ಅನುಭವ ಲೇಖನ ಸರ್. 💐👌👍
ಪ್ರತ್ಯುತ್ತರಅಳಿಸಿಗುರುಗಳೆ, ಇದು ಅತ್ಯುತ್ತಮ ಲೇಖನ.
ಪ್ರತ್ಯುತ್ತರಅಳಿಸಿGood and realistic content
ಪ್ರತ್ಯುತ್ತರಅಳಿಸಿ“Nice article, Sir. You have explained everything very clearly and captured all the important details about selecting engineering branches in those days. It brought back many memories. Thank you, Sir—eagerly looking forward to Version 2.”
ಪ್ರತ್ಯುತ್ತರಅಳಿಸಿ“Nice article, Sir. You have explained everything very clearly and captured all the important details about selecting engineering branches in those days. It brought back many memories. Thank you, Sir—eagerly looking forward to Version 2.”
ಪ್ರತ್ಯುತ್ತರಅಳಿಸಿAnother great article.. influence at right time can change careers!
ಪ್ರತ್ಯುತ್ತರಅಳಿಸಿI was in Mechanical engineering and wanted to pursue the same. Since my elder brother was a Mechanical engineer.. I was convinced to choose E and CE.. it worked out well in the end.
I had similar experience in Electrical Engineering dept and decided never to do anything related to Electrical.
Keep writing ✍️..
Your learnings and experiences are really to be followed by youngsters. Very interesting article.👌👌👌👌
ಪ್ರತ್ಯುತ್ತರಅಳಿಸಿನಿಜವಾದ ಅನುಭವವನ್ನು ಸಂಬಂಧಿತ ಸಂಗತಿಯೊಂದಿಗೆ ವಿವರಿಸಲಾಗಿದೆ. ಸೂಪರ್ ಬರಹ.
ಪ್ರತ್ಯುತ್ತರಅಳಿಸಿಸೂಪರ್ ಲೇಖನ ಓದಿ ಸಂತೋಷವಾಗಿದೆ.
ಪ್ರತ್ಯುತ್ತರಅಳಿಸಿನಮಸ್ಕಾರಗಳು,
ಪ್ರತ್ಯುತ್ತರಅಳಿಸಿಲೇಖನ ಚೆನ್ನಾಗಿದೆ.ಅಂದಿನ ಆಯ್ಕೆ ಇಂದು ನೂರಾರು ಇಂಜನಿಯರಿಂಗ್ ಕಾಲೇಜಿನಲ್ಲಿ ಸೀಟು ಉಳಿದದ್ದನ್ನು ತಾಳಿಸಿ ನೋಡಿದೆ.
I also think that while childhood influences a lot of our decisions, sometimes it's the later experiences and challenges that help shape our career choices in ways we don't expect. Have you found that to be true as well in your journey?”
ಪ್ರತ್ಯುತ್ತರಅಳಿಸಿSuper inspiring story
ಪ್ರತ್ಯುತ್ತರಅಳಿಸಿVery well put Jayant. As always with humor and reality.Being your batchmate, I can relate dilemmas in choosing the branch. Thank God we had only 4 to 5 branches to make choice and we ended making a choice with some interesting 'tarkas' ...But finally all went well irrespective of the branch for all of us. Great way to share life experiences. Keep doing..
ಪ್ರತ್ಯುತ್ತರಅಳಿಸಿYour academic journey from PU TO PRINCIPALSHIP is interesting and inspirational one with the fragrance of humour. Proudfelt Congratulations. GSK
ಪ್ರತ್ಯುತ್ತರಅಳಿಸಿ