ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...
ಈ ಶ್ವೇತ ವರಾಹ ಕಲ್ಪದ ವೈವಸ್ವತ ಮನ್ವಂತರದ ೨೮ನೇ ಕಲಿಯುಗದ ಗತ ಶಾಲಿವಾಹನ ಶಕ ವರ್ಷ ೧೯೪೭ ವಿಶ್ವಾವಸು ಸಂವತ್ಸರದಲ್ಲಿ ಗೂಗಲ್/ಚಾಟ್ ಜಿಪಿಟಿಗಳೇ ಗುರುಗಳು ಮತ್ತೂ ಅವುಗಳು ಹೇಳಿದ್ದೇ ವೇದವಾಕ್ಯ ಎಂದು ನಂಬಿರುವ ನವದಂಪತಿಗಳು ನುರಿತ ಪ್ರಸೂತಿ ತಜ್ಞ ವೈದ್ಯರ ಇಲ್ಲವೇ ಕನಿಷ್ಠ ಪಕ್ಷ ಅನುಭವಿ ಪ್ರಸೂತಿಕಾಗ್ರಹದ ದಾದಿಯ ಸಲಹೆ/ಸಹಾಯವನ್ನೂ ಕೇಳದೇ ತಮ್ಮ ಪ್ರಥಮ ಮಗುವಿನ ಹೆರಿಗೆಯ ಸಮಯದಲ್ಲಿ ಕೇವಲ ಗೂಗಲ್/ಚಾಟ್ ಜಿಪಿಟಿಗಳ ವಿಶ್ಲೇಷಣೆ ಅಥವಾ ವಿವರಗಳನ್ನು ನಂಬಿ ಯಡವಟ್ಟು ಮಾಡಿಕೊಳ್ಳುವುದನ್ನು ಪತ್ರಿಕೆಗಳಲ್ಲಿ ಓದಿರಬಹುದು. ಈಗ PUC, CET ಪರೀಕ್ಷೆ ಬರೆದ ಬಹಳಷ್ಟು ವಿದ್ಯಾರ್ಥಿಗಳ ಮತ್ತೂ ಅವರ ಪಾಲಕರ ಪರಿಸ್ಥಿತಿಯೂ ಇದೇ ತೆರನಾಗಿದೆ. ಮರಾಠಿಯಲ್ಲಿ ಒಂದು ಗಾದೇಮಾತಿದೆ "ಐಕಾವ ಜನಾಚ ಕರಾವ ಮನಾಚ" ಅದರ ಅರ್ಥ, ಯಾರದೋ ಮಾತನ್ನು ಕಣ್ಣುಮುಚ್ಚಿ ನಂಬದೇ ಎಲ್ಲರ ವಿಚಾರಗಳನ್ನು ಕೇಳಿ ಸಾರಾಸಾರ ವಿಚಾರಮಾಡಿ ನಿನ್ನ ನಿರ್ಧಾರ ತೆಗೆದುಕೊ ಎಂದು.ಇಂದು ನೀವು ತೆಗೆದುಕೊಳ್ಳುವ ನಿರ್ಧಾರ ಬೆಳಗ್ಗೆ ಶೇರುಪೇಟೆ ಸೂಚ್ಯಂಕ ನೋಡಿ ಹಣ ಹೂಡುವ ನಿರ್ಧಾರ ಮಾಡಿ ಮಧ್ಯಾಹ್ನದ ವೇಳೆಗೆ ಹೂಡಿದ ಹಣ ವೃದ್ಧಿಯಾಗಿ ಅಥವಾ ಕ್ಷೀಣಿಸಿ ವ್ಯಾಪಾರ ವ್ಯವಹಾರ ಮುಗಿಸಿ ಮತ್ತೆ ನಾಳೆಗೆ ಹೊಸದಾಗಿ ಅದೃಷ್ಟಕ್ಕೆ ಪ್ರಯತ್ನಿಸುವ ಶೇರು ಮಾರುಕಟ್ಟೆಯ ಡೇ ಟ್ರೇಡಿಂಗ್ ನಿರ್ಧಾರದ ತರಹದ್ದಲ್ಲ. ಬದಲಾಗಿ ಇಂದು ತಾವು ತೆಗೆದುಕೊಳ್ಳುವ ನಿರ್ಧಾರ ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಬಹ...