೧೦೧ ನೇ ಮಿಷನ್
ಮೊನ್ನೆ ಮೇ ೧೮ ರ ಬೆಳಗ್ಗೆ, ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ PSLV ರಾಕೆಟ್ ಅಸಮರ್ಪಕ ಕಾರ್ಯಕ್ಕೆ ಒಳಗಾದ ಕಾರಣ ಇಸ್ರೋದ ೧೦೧ ನೇ ಮಿಷನ್ ವಿಫಲವಾಗಿದೆ ಎಂಬ ಕಹಿ ಸುದ್ದಿಯನ್ನು ತಾವೂ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಓದಿ/ಕೇಳಿರಬಹುದು. ಈ ಘಟನೆ 'ನಡೆಯುವವರು ಎಡುವದೇ ಕುಳಿತವರು ಎಡುವರೇ' ಎಂಬ ಗಾದೆಯನ್ನು ನೆನಪಿಸುವುದು. ಯಮುನೆಯ ಮಡುವಿನಲ್ಲಿ ವಿಷವನ್ನು ಕಾರಿ ಅಮಾಯಕ ಗೋವುಗಳು ಮತ್ತು ಗೋಪಾಲಕರಿಗೆ ತೊಂದರೆ ಕೊಡುತ್ತಿದ್ದ ಕಾಳಿಂಗ ಸರ್ಪದ ಹೆಡೆಯ ಮೇಲೆ ಬಾಲಕೃಷ್ಣ ಹಾರಿ ನೃತ್ಯಮಾಡಿ ದಮನ ಮಾಡಿದ್ದ ಎಂಬ ವಿಚಾರ ಶ್ರೀಮದ್ಭಾಗವತದ ದಶಮಸ್ಕಂದದಲ್ಲಿ ಬರುತ್ತದೆ. ಅದೇ ರೀತಿ, ಅಮಾಯಕ ಯಾತ್ರಿಕರಿಗೆ ಗುಂಡಿಟ್ಟು ಕೊಂದ ಆ ಶತ್ರುದೇಶದ ಭಯೋತ್ಪಾದಕರ ಠಿಕಾಣಿಗಳ ಮೇಲೆ ನಮ್ಮ ಭಾರತೀಯ ರಕ್ಷಣಾ ಪಡೆ ಬ್ರಹ್ಮೋಸ ಮತ್ತು ಆಕಾಶತೀರ ದಂತಹ ದೇಶೀಯ ಕ್ಷಿಪಣಿಗಳಿಂದ ದಾಳಿಮಾಡಿ ಧ್ವಂಸಮಾಡಿದ ಸುದ್ದಿ ತಮಗೂ ಗೊತ್ತಿರುವ ವಿಷಯ. ಇದೇ ಮೇ ತಿಂಗಳ ಮೊದಲ ವಾರ ಪ್ರಾರಂಭವಾದ ರಕ್ಷಣಾ ಪಡೆಗಳ ಈ ಆಪರೇಷನ್ ಸಿಂದೂರದ ಅಭೂತಪೂರ್ವ ಕಾರ್ಯಕ್ಷಮತೆಯ ಹಿಂದೆ ಮಹತ್ವದ ಹಿಮ್ಮೇಳ ಹಾಕಿದ್ದು ನಮ್ಮ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಎಂಬುದು ಶ್ಲಾಘನೀಯ. ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಹಾಗು ತಂತ್ರಜ್ಞನರು ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ರಾಕೆಟಗಳ ಮತ್ತು ಅವು ಹೊತ್ತು ಒಯ್ದು ಕರಾರುವಕ್ಕಾದ ಕಕ್ಷೆಯಲ್ಲಿ ಸ್ಥಾಪಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರವ ...