ಸತ್ತ ಗುರು !!!
ನಮ್ಮ ಜಾತ್ಯಾತೀತ ದೂರದರ್ಶನದ ಚಂದನ ವಾಹಿನಿಯನ್ನು ನೋಡುತ್ತಿದ್ದವರಿಗೆ 1994 ರಲ್ಲಿ ಉದಯಾ ಟಿವಿ ಖಾಸಗಿ ಕೇಬಲ್ ವಾಹಿನಿ ಪ್ರಾರಂಭವಾದದ್ದು BSNL ನ ಲ್ಯಾಂಡಲೈನ ಫೋನಿನಿಂದ ಏಕ್ದಂ Jio ದ ಸಿಮ್ ಗೆ ಜಿಗಿದ ಅನುಭವವಾಗಿತ್ತು. ಉದಯಾ ಟಿವಿಯಲ್ಲಿ ಬಿತ್ತರವಾಗುತ್ತಿದ್ದ ಬಹುತೇಕ ಕಾರ್ಯಕ್ರಮಗಳು ವೀಕ್ಷಕರ ಮನಗೆದ್ದಿದ್ದವು. ರವಿವಾರ ಬೆಳಗ್ಗೆ ಪ್ರಸಾರವಾಗುತ್ತಿದ್ದ S K ಜೈನ ಅವರ ವಾರದ ಭವಿಷ್ಯ ಕಾರ್ಯಕ್ರಮ ಬಹಳೇ ಪ್ರಸಿದ್ಧಿ ಪಡೆದಿತ್ತು. ಮುಂದಿನ ವಾರದ ಗೋಚಾರದಲ್ಲಿ ಯಾವ ಗ್ರಹಗಳು ಯಾವ ರಾಶಿಯಲ್ಲಿ ಇರುತ್ತವೆ ಮತ್ತು ಅವುಗಳ ಪ್ರಭಾವ ಯಾವ ರಾಶಿಯವರಿಗೆ ಹೇಗಿರುತ್ತದೆ, ಯಾವ ರಾಶಿಯವರಿಗೆ ಶನಿಯ ಸಾಡೇಸಾತಿ ನಡೆದಿದೆ, ಮುಗಿದಿದೆ ಅಥವಾ ಸಾಡೆಸಾತಿ ಹಿಡಿಯುವುದಿದೆ, ಅದರಂತೆಯೇ ಗುರುವಿನ ಚಲನೆ ಹೇಗಿದೆ, ಯಾವ ರಾಶಿಯವರಿಗೆ ಗುರು ಉಚ್ಚವಾಗಿದೆ, ನೀಚವಾಗಿದೆ ಮತ್ತು ಯಾವ ರಾಶಿಯವರಿಗೆ ಗುರು ಅಸ್ತವಾಗಿದೆ ಇತ್ಯಾದಿಗಳನ್ನು ವಿವರಿಸುತ್ತಿದ್ದರು. ಆದರೆ, ನಾವು ಯಾರೂ ಆ ಉದಯಾ ಟಿವಿಯಲ್ಲಿಯ S K ಜೈನರ ವಾರದ ಭವಿಷ್ಯ ಕಾರ್ಯಕ್ರಮದಲ್ಲಿ ಗುರು ಸತ್ತ ವಿಚಾರ ಎಂದೂ ಕೇಳಿರಲಿಕ್ಕಿಲ್ಲ ಅಲ್ಲವೇ. ಆದರೆ ಹೋದ ವರ್ಷ(೦೧.೦೪.೨೦೨೪) ಏಕಾಏಕಿ ವಾಟ್ಸ್ಯಾಪ ಗುಂಪುಗಳನ್ನೂ ಮೊದಲು ಮಾಡಿಕೊಂಡು ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಗಡಿನಾಡು, ಕುಂದಾನಗರಿ ಬೆಳಗಾವಿಯ ಒಂದು ಅಂಗಡಿಯ 'ಸತ್ತಗುರು' ಎಂಬ ಬೋರ್ಡಿನ ಚಿತ್ರ ವೈರಲ್ ಆಗಿ ಹರಿದಾಡಿ ಸದ್ದು ...