ಪೋಸ್ಟ್‌ಗಳು

ನವೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನನ್ನ ಇಂಜಿನಿಯರಿಂಗ್ ಬ್ರ್ಯಾಂಚ...

ಕಲಬುರ್ಗಿಯಲ್ಲಿ ಹೊಳಿ ಹಬ್ಬದ ನಂತರ ಬರುವ ಶರಣಬಸವೇಶ್ವರ ಜಾತ್ರೆಯನ್ನು ಬಾಲ್ಯದ ದಿನಗಳಲ್ಲಿ ನಾವು ಬಹಳ ಉತ್ಸುಕತೆಯಿಂದ ಇದಿರು ನೋಡುತ್ತಿದ್ದೆವು. ಕಾರಣವಿಷ್ಟೆ, ಪ್ರತೀ ವರ್ಷ ರಂಗಪಂಚಮಿಯ ದಿನದಂದು ಅಪ್ಪನ ತೇರು ಎಳೆಯುವುದಕ್ಕೂ ಹದಿನೈದು ದಿನಗಳ ಮೊದಲೇ ಕಬ್ಬಿನ ಹಾಲಿನ ಅಂಗಡಿಗಳು ಬೀಳುತ್ತಿದ್ದವು. ಅಪ್ಪನ ತೇರು ಎಳೆದ ದಿನದಿಂದ ಮುಂದಿನ ಹದಿನೈದು ದಿನಗಳವರೆಗೆ ನಮಗೆ ಜಾತ್ರೆಯಲ್ಲಿ ವಿವಿಧ ಅಂಗಡಿಗಳಲ್ಲಿ ವಿಜಾಪುರದ ಚಿವಡಾ, ಗೋಕಾಕಿನ ಕರದಂಟು, ಗಾಣದ ಉಂಡಿ, ಬೆಂಡು ಬತ್ತಾಸುಗಳು ಸವಿಯಲು ಸಿಗುತ್ತಿದ್ದವು. ಮನೆಯಲ್ಲಿ ಅಪ್ಪನ ಜಾತ್ರೆಗೆಂದು ಸಿಗುತ್ತಿದ್ದ ಹತ್ತಿಪ್ಪತ್ತು ಪೈಸೆಯಲ್ಲಿ ಯಾವುದನ್ನು ತಿನ್ನುವುದು ಯಾವುದನ್ನು ಬಿಡುವುದು ಎಂದು ನಿರ್ಧರಿಸಲು ನಮಗೆ ಬಹಳ ಕಷ್ಟವಾಗುತ್ತಿರಲಿಲ್ಲ. ಆ ಮಾತಿಗೆ ದಶಕಗಳು ಕಳೆದಂತೆ, ಈಗಿನ ಹುಡುಗರು ಆ ಮಿಠಾಯಿಗಳನ್ನು ಸವಿಯಲು ಊರ ಜಾತ್ರೆಯ ಇದಿರು ನೋಡಬೇಕಾಗಿಲ್ಲ. ಕೇವಲ ಅವಷ್ಟೇ ಅಲ್ಲ ಇನ್ನೂ ನೂರಾರು ಬಗೆಯ ಸಿಹಿ ಖಾರ ತಿಂಡಿ ಖಾದ್ಯಗಳ ಮತ್ತು ವಿವಿಧ ಬಗೆಯ ಪೇಯಗಳ ಅಂಗಡಿ ಮಳಿಗೆಗಳು ಊರಿನ ಎಲ್ಲಾ ಗಲ್ಲಿ, ರಸ್ತೆಗಳಲ್ಲಿ ತಲೆಯತ್ತಿವೆ ಮತ್ತು ಈಗಿನ ಹುಡುಗರ ಕೈ, ಜೇಬು, ಫೋನ ತುಂಬಾ ಹಣ ಇರುತ್ತದೆ. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಇಂದಿನ ಹುಡುಗರಿಗೆ ಯಾವುದನ್ನು ತಿನ್ನಲಿ, ಯಾವುದನ್ನು ಬಿಡಲಿ, ಯಾವುದು ಒಳ್ಳೆಯ ಅಂಗಡಿ, ಎಲ್ಲಿ ರುಚಿಕರ ಮತ್ತು ಶುದ್ಧ ಖಾದ್ಯಗಳು ಲಭ್ಯ ಎಂದು ಆಯ್ಕೆ ಮಾಡುವುದೇ ಒಂದು...

ಸ್ವಚ್ಛತೆಯವರು...

ನಾವು ಮಾಡುವ ಊಟ ಒಂದು ಯಜ್ಞವಿದ್ದಂತೆ, ಊಟ ಮಾಡುವಾಗ ಮಾತನಾಡಬಾರದು, ಮಾತು ಬೆಳೆದು ಕಲಹಕ್ಕೆ ಕಾರಣವಾದೀತು ಎಂದು ನಮ್ಮಮ್ಮ ಯಾವಾಗಲೂ ಹೇಳುತ್ತಿದ್ದರು. ಆ ಮಾತು ಇಷ್ಟು ವರ್ಷಗಳ ನಂತರ ಈಗ ಅಂದರೆ, ನನ್ನ ನಿವೃತ್ತಿಯ ನಂತರ ಬಹಳ ನೆನಪಾಗುತ್ತಿದೆ. ಅದಕ್ಕೆ ಇತ್ತೀಚೆಗೆ ನಿವಾಂತವಾಗಿ ಮನೆಯಲ್ಲಿ ಮಾತಾಡದೇ ಆದರೆ ರೇಡಿಯೋ ಹಚ್ಚಿ ಸಂಗಿತ ಕೇಳುತ್ತಾ ಊಟ ಮಾಡುವುದನ್ನು ಪ್ರಾರಂಭಿಸಿರುವುದು. ಈಗ ನನಗೆನೋ ಊಟ ರುಚಿಸುತ್ತಿದೆ ಆದರೆ, ಏಕೋ ನನ್ನ ಶ್ರೀಮತಿಗೆ ಅಷ್ಟು ರುಚಿಸುತ್ತಿಲ್ಲವಂತೆ. ನೀವು ಇದಕ್ಕೆ ಬೇರೆ ಅರ್ಥವನ್ನು ಕಲ್ಪಿಸುವುದಕ್ಕೂ ಮುನ್ನ ನಾನೇ ಹೇಳಿಬಿಡುತ್ತೇನೆ. ನಿಜ, ನೂರು ಪ್ರತಿಶತ ನಿಜ, ನಿವೃತ್ತಿಯ ನಂತರ ನಿಮ್ಮಂತೆ ನಾನೂ ನಳಪಾಕನಾಗಿರುವುದೇ ನನ್ನಾಕೆಗೆ ಊಟ ರುಚಿಸದೇ ಇರಲು ಕಾರಣವೇ ಹೊರತು ನೀವು ಊಹಿಸಿದಂತಲ್ಲ!!. ಈ ಮಾತನ್ನು ಅವಳ ಅನುಮತಿ ಪಡೆದೇ ನಿಮ್ಮೊಂದಿಗೆ ಹೇಳುತ್ತಿರುವುದು, ಇರಲಿ. ಇತ್ತೀಚೆಗೆ ನಮ್ಮ ಆಕಾಶವಾಣಿಯಲ್ಲಿ ಒಂದು ಮಹತ್ವದ ಜಾಹೀರಾತು ಮತ್ತೆ ಮತ್ತೆ ಬಿತ್ತರವಾಗುತ್ತಿದೆ. ಅಷ್ಟು ಮಹತ್ವದ ಜಾಹೀರಾತು ಯಾವುದೆಂದಿರಾ, ನಿಮಗೂ ಗೊತ್ತಿರುವ ವಿಷಯವೇ, ಅದೇ ಮನೆಯ ಸೆಪ್ಟಿಕ್ ಟ್ಯಾಂಕನಲ್ಲಿ ಶೇಖರವಾದ ಸ್ಲಜ್ಜನ್ನು ತಪ್ಪದೇ ಪ್ರತಿ ಮೂರು ವರ್ಷಕ್ಕೊಮ್ಮೆ ಖಾಲಿಮಾಡಿಸುವ ಅಗತ್ಯತೆಗಳನ್ನು ಹೇಳುವ ವಿಷಯ. ಇಲ್ಲದಿದ್ದರೆ ನಿಮ್ಮ ಮನೆಯ ಪೈಖಾನೆಯ(ಸಂಡಾಸದ) ಸೆಪ್ಟಿಕ್ ಟ್ಯಾಂಕ ತುಂಬಿ ಅಲ್ಲಿನ ಮಲಿನ ನೀರು ಹೊರಬಂದು ಮನೆಯ ಸುತ್ತ ಗಬ್ಬ...