ನನ್ನ ಬಿಳಿ ತಲೆಯ ಬಣ್ಣಗಳು...ಭಾಗ- ೩ (ಕೊನೆಯ ಭಾಗ)
ಭಾಗ....೩ (ಕೊನೆಯ ಭಾಗ) ಈಗ್ಗೆ ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಸಮವಯಸ್ಕ ಸಹೋದ್ಯೋಗಿಯ ಒತ್ತಾಯಕ್ಕೆ ಮಣಿದು ಕೇಂದ್ರ ಸರ್ಕಾರ ಬ್ಯಾಂಕ್ ಗಳ ಮುಖಾಂತರ ಅತೀ ಕಡಿಮೆ ಬಡ್ಡಿದರದಲ್ಲಿ ನೀಡುವ ಗೃಹ ನಿರ್ಮಾಣದ ಸಾಲ ಮೇಳಕ್ಕೆ ತೆರಳಿದೆ. ಆ ಸಂದರ್ಭದಲ್ಲಿ ಕೇವಲ ನಮ್ಮ ಎರಡು ಭಾವಚಿತ್ರಗಳು ಮತ್ತು ಸ್ಯಾಲರೀ ಸರ್ಟಿಫಿಕೇಟ್ ಹಾಜರುಪಡಿಸಿದರೆ ಅಲ್ಲಿದ್ದ ಬ್ಯಾಂಕ್ ಅಧಿಕಾರಿ ನಮಗೆ ಎಷ್ಟು ಮೊತ್ತದ ಗೃಹ ಸಾಲ ಮಂಜೂರು ಮಾಡಲಾಗುವುದು ಎಂಬುದರ ಪತ್ರವನ್ನು ಸ್ಥಳದಲ್ಲಿಯೇ ನೀಡುತ್ತಿದ್ದರು. ನನ್ನ ಸಹೋದ್ಯೋಗಿಗೆ ಎಂಟು ಲಕ್ಷ ಸಾಲ ಮತ್ತು ನನಗೆ ಅವರಿಗಿಂತ ಎರಡು ಲಕ್ಷ ಕಡಿಮೆ ಮಂಜೂರು ಮಾಡುವುದಾಗಿ ಅಲ್ಲಿದ್ದ ಅಧಿಕಾರಿಯು ತಿಳಿಸಿದರು. ನನಗೇಕೆ ನನ್ನ ಸಹೋದ್ಯೋಗಿಗಿಂತಲೂ ಕಡಿಮೆ ಸಾಲ ಮಂಜೂರು ಮಾಡಲಾಗುವುದು ಎಂದು ವಿಚಾರಿಸಿದಾಗ ಆ ಬ್ಯಾಂಕ್ ಅಧಿಕಾರಿ ಒಮ್ಮೆ ನನ್ನ ಬಿಳಿ ತಲೆಗೂದಲನ್ನು ನೋಡಿ ನಿಮ್ಮ ವಯಸ್ಸಿಗೆ ಇಷ್ಟೇ ಕೊಡಲು ಸಾಧ್ಯ ಎನ್ನಬೇಕೇ!!. ನಾನು ಲಗುಬಗೆಯಿಂದ ಮನೆಗೆ ತೆರಳಿ ನನ್ನ SSLC ಮಾರ್ಕ್ಸ್ ಕಾರ್ಡನ್ನು ತಂದು ತೋರಿಸಿ ನನ್ನ ವಯಸ್ಸನ್ನೂ, ಅದರಂತೆ ನನ್ನ ನಿವೃತ್ತಿಗೆ ಬಾಕಿ ಇರುವ ವರ್ಷಗಳ ಲೆಖ್ಖ ಕೊಟ್ಟಾದ ಮೇಲೆ ಆ ಅಧಿಕಾರಿ ಕ್ಷಮೆಯಾಚಿಸಿ ನನಗೆ ಹೆಚ್ಚಿನ ಸಾಲ ಮಂಜೂರಾತಿಯ ಪತ್ರವನ್ನು ಸ್ಥಳದಲ್ಲಿಯೇ ನೀಡಿದರು. ಹೀಗೆ ಬ್ಯಾಂಕ್ ಸಾಲ ಪಡೆದು ಮನೆ ಕಟ್ಟಿಸಿದ ಹೊಸದರಲ್ಲಿ ನಮ್ಮ ಪಕ್ಕದ ಮನೆಯ ರಾಯರ ಮಗಳು ಮತ್ತು ಅಳಿಯ ದೂರದ ಊರಿಂದ ಅವರ ಮನೆಗೆ ಆಗಮಿ...