ನನ್ನ ಬಿಳಿ ತಲೆಯ ಬಣ್ಣಗಳು (ಭಾಗ-೨).
ಭಾಗ...೨ (ಕೊನೆಯದಕ್ಕೂ ಮೊದಲಿನ ಭಾಗ) ನಮ್ಮ ಮಗಳನ್ನು ಮನೆ ಸನಿಹದ ಪ್ರಾಥಮಿಕ ಶಾಲೆಗೆ (ನಡೆದುಕೊಂಡು ಹೋಗಿ) ಬಿಟ್ಟುಬರುವ ಮತ್ತೂ ಮನೆಗೆ ಕರೆದುಕೊಂಡು ಬರುವ ಕೆಲಸ ನನ್ನ ಶ್ರೀಮತಿಯದಾಗಿತ್ತು. ಅದೇನೋ ಒಂದು ದಿನ, ಮಗಳನ್ನು ಶಾಲೆಯಿಂದ ಕರೆತರಲು ನಾನು ನನ್ನ ಬೈಕ್ ಮೇಲೆ ತೆರಳಿದೆ. ಮನೆ ಸೇರಿದ ಮೇಲೆ ನನ್ನ ಮಗಳು, ಇನ್ನು ಮೇಲೆ ಅಪ್ಪ ನನ್ನನ್ನು ಶಾಲೆಗೆ ಬಿಡಲು ಅಥವಾ ಕರೆಯಲು ಬರುವಂತಿಲ್ಲ ಎಂದು ಫರ್ಮಾನು ಹೊರಡಿಸಿದಳು. ನಾನು ಮಗಳನ್ನು ಸರಿಯಾಗಿ ಕೂಡಿಸಿಕೊಂಡು ನಿಧಾನವಾಗಿ ಬೈಕ್ ಓಡಿಸಿಕೊಂಡು ಬಂದರೂ,ನನ್ನ ಮಗಳು ಹೀಗೇಕೆ ಕಾಯ್ದೆಮಾಡಲು ಹಟ ಹಿಡಿದಿದ್ದಾಳೆಂದು ಕಾರಣ ತಿಳಿದುಬರಲಿಲ್ಲ. ನಂತರ ಶ್ರೀಮತಿಯಿಂದ ತಿಳಿದಿದ್ದೇನೆಂದರೆ, ನಾನು ಮಗಳ ಕ್ಲಾಸಿನ ಟೀಚರ್ ಹತ್ತಿರ ನಮ್ಮ ಮಗಳನ್ನು ಕರೆದುಕೊಂಡು ಹೋಗಲು ಬಂದಿರುವುದಾಗಿ ತಿಳಿಸಿದಾಗ, ನನ್ನ ಮಗಳ ಗೆಳೆತಿಯರು ನನ್ನ ಕರಿಮಿಶ್ರಿತ ಬಿಳಿ ತಲೆಯನ್ನು ಗಮನಿಸಿ ನಿಮ್ಮ 'ಅಜೋಬಾ' ನಿನ್ನನ್ನು ಕರೆದುಕೊಂಡು ಹೋಗಲು ಬಂದಿರುವರು ಎಂದಿದ್ದರಂತೆ.!!! ಅಂತೂ, ಅಂದಿನಿಂದ ಮುಂದೆಂದೂ ನಾನು ಅವಳ ಪ್ರಾಥಮಿಕ ಶಾಲೆಗೆ ಹೋಗಲಿಲ್ಲ. ಇನ್ನು ಅವಳು ಹೈಸ್ಕೂಲಿಗೆ ಬರುವಷ್ಟರಲ್ಲಿ ನಾನೂ ನಮ್ಮ ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್ ಆಗಿ ಬಡ್ತಿ ಹೊಂದಿದ್ದೆ.ಅದನ್ನರಿತ ಅವರ ಶಾಲೆಯ ಆಡಳಿತ ಮಂಡಳಿ, ಕರಿಯರ್ ಪ್ಲಾನಿಂಗ್ ವಿಷಯದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಲು ನನ್ನನ್ನು ತಮ್ಮ ಶಾಲೆಗೆ ಆವ್ಹಾನಿಸಿದರಷ್ಟೇ ಅ...