ಪೋಸ್ಟ್‌ಗಳು

ಮಾರ್ಚ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗೋಡೆ ಬರಹ

ಮೊನ್ನೆ ಮೊನ್ನೆ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಾತಿಯ ಅತಿರೇಕ ಅವಾಂತರಗಳ ಬಗ್ಗೆ ತಾವೆಲ್ಲ ಪತ್ರಿಕೆಗಳಲ್ಲಿ ಓದಿರಬಹುದು ಇಲ್ಲವೇ ಟೀವಿಯ ಸುದ್ದಿ ಮಾಧ್ಯಮಗಳಲ್ಲಿ ನೋಡಿರಲೂಬಹುದು. ಅನೇಕ ಹಳ್ಳಿಗರ ಮನೆಯ ಗೋಡೆಗಳ ಮೇಲೆ 'ಈ ಸ್ವತ್ತು ಇಂತಹವರಿಗೆ ಅಡಮಾನವಾಗಿದೆ' ಎಂದು ಕರಿ ಮಸಿಯಿಂದ ಬರೆದಿರುವ ಫೋಟೋಗಳನ್ನೂ ಪತ್ರಿಕೆಗಳಲ್ಲಿ ನೋಡಿರಬಹುದು. ಈ ಮೈಕ್ರೋ ಫೈನಾನ್ಸಗಳು ಅತೀ ಕಡಿಮೆ ವಾರ್ಷಿಕ ಆದಾಯದ ಕುಟುಂಬದ ಅವಶ್ಯಕತೆಗೆ ಅನುಸಾರವಾಗಿ ಕುಟುಂಬದ ಸದಸ್ಯರಿಗೆ ನೀಡುವ ಸಾಲದ ಕಾರ್ಯನಿರ್ವಹಣಾ ಮಾರ್ಗಸೂಚಿಯ ವಿವರಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ೨೦೨೨ ನಲ್ಲಿಯೇ ಪ್ರಕಟಿಸಿದೆ. ಕೇಂದ್ರ ಸರ್ಕಾರದ, ಭಾರತೀಯ ರಿಸರ್ವ್ ಬ್ಯಾಂಕಿನ, ಸಣ್ಣ ಸಾಲ ನೀಡುವ ಮೈಕ್ರೋ ಫೈನಾನ್ಸ್ ನವರ ಮತ್ತು ಸಾಲ ಪಡೆಯುವವರ ಹೀಗೆ ಎಲ್ಲರ ಉದ್ದೇಶಗಳು ಒಳ್ಳೆಯದೇ ಆಗಿದ್ದರೂ, ಅನಿವಾರ್ಯವಾಗಿ ಅಥವಾ ಪರಿಸ್ಥಿತಿ ಕೈಮೀರಿಯೋ ಅಥವಾ ಇನ್ನಾವುದೋ ಕಾರಣದಿಂದ ಸಕಾಲದಲ್ಲಿ ಸಾಲ ಮರುಪಾವತಿ ಮಾಡುವುದಕ್ಕಾಗದ ಪರಿಸ್ಥಿತಿಯಲ್ಲಿ ಸಾಲ ಪಡೆದವರ ಮನೆಯ ಗೋಡೆಗಳ ಮೇಲೆ ಮೈಕ್ರೋ ಫೈನಾನ್ಸ್ ಕಡೆಯವರು 'ಈ ಸ್ವತ್ತು ಇಂತಹವರಿಗೆ ಅಡಮಾನವಾಗಿದೆ' ಎಂದು ಬರೆದುದರಿಂದ ಅಪಮಾನಿತರಾದ ಸಾಲಗಾರರು, ಕೇವಲ ಆ ಮನೆಯನ್ನಲ್ಲದೇ ಆ ಊರನ್ನೇ ತೊರೆದು ಗುಳೆ ಹೋಗುತ್ತಿರುವುದು ಅಥವಾ ಇನ್ನಾವುದೋ ಅತಿರೇಕದ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ಖೇದಕರ. ಇದು ಒಂದು ರೀತಿಯಲ್ಲಿ ತಾತ್ಕಾಲ...