ಪೋಸ್ಟ್‌ಗಳು

ಜೂನ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪರಾವಲಂಬಿ

ಚಿತ್ರ೧ ಚಿತ್ರ೨ ಮೊನ್ನೆ ಶ್ರೀ ವಾದಿರಾಜರು ಶ್ರೀಮದ್ ವ್ಯಾಸಮಹರ್ಷಿಗಳನ್ನು ಭಜಿಸಲು ರಚಿಸಿದ  ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ ... ಎಂಬ ಪದ ಕೇಳುತ್ತಿದ್ದೆ. ಅದರಲ್ಲಿ ಮುಂದೆ ಬರುವ ಒಂದು ಸಾಲು .... ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್‍ಸ್ವಾಮಿ ನೀನೆಂದು ತೋರಿಸಿದೆ... ಎಂದು ಬರುತ್ತದೆ. ಇಂದಿನ ಆಧುನಿಕತೆಯ ದಿನಗಳಲ್ಲಿ ಈ ಭಾಗದಲ್ಲಿ ಬರುವ  ಕ್ರಿಮಿಯಿಂದ ರಾಜ್ಯವಾಳಿಸಿದೆ ಎಂಬುದನ್ನು ಈ ಕೋವಿಡ್ ಬರುವುದಕ್ಕೂ ಮುನ್ನ ಮನವರಿಕೆ ಮಾಡಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸವಾಗಿತ್ತು. ಆದರೆ, ಈ ಶತಮಾನದ ಮಹಾಮಾರಿ ಕೋವಿಡ್ ನಿಂದಾಗಿ ಇಡೀ ಭೂಮಂಡಲವೇ ತಲ್ಲಣಿಸಿ ಹೋಯಿತು. ಇತ್ತೀಚಿನ ತಲೆಮಾರುಗಳು ಕಂಡೂ ಕೇಳರಿಯದ ಸಾವು-ನೋವು, ಕಷ್ಟ-ನಷ್ಟ, ದುಃಖ-ದುಮ್ಮಾನ, ಮಾನಸಿಕ ಖಿನ್ನತೆ-ಹತಾಶೆ, ವ್ಯಾಪಾರ-ವ್ಯವಹಾರಗಳ ಮಂದಗತಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಲಾಕ್ ಡೌನ್ ಮುಂತಾದ ಅನೇಕ ಋಣಾತ್ಮಕ ಪರಿಣಾಮಗಳನ್ನು ಜನ ಸಾಮಾನ್ಯರು ಅನುಭವಿಸಿದರು. ಜಾಗತಿಕವಾಗಿ ಆರ್ಥಿಕ ಪ್ರಗತಿಯಲ್ಲಿ ಕುಂಠಿತವಾಯಿತು. ಜಗತ್ತಿನ ಹಿಂದುಳಿದ-ಮುಂದುವರಿದ, ಬಡವ-ಶ್ರೀಮಂತ, ಹೀಗೆ ಭೇದವಿಲ್ಲದೇ ಎಲ್ಲ ಖಂಡಗಳ ಎಲ್ಲ ದೇಶಗಳ ಜನರು ಸಾವು ಬದುಕಿನೊಂದಿಗೆ ಹೋರಾಡುವಾಗ ಅವರನ್ನು ಹೇಗೆ ರಕ್ಷಿಸಬೇಕು ಎಂದು ತಿಳಿಯದೇ ದೇಶಗಳನ್ನು ಆಳುವವರು ಹತಾಶರಾದರು. ಇದೇ ನೋಡಿ ಆ ಕ್ರಿಮಿಯಿಂದ ರಾಜ್ಯವಾಳಿಸಿದೆ ಎಂಬ ಸಾಲುಗಳ ಅರ್ಥ ಎಂದು ಮನವರಿಕೆ ಆಯಿತು. ಇರ...