ಪೋಸ್ಟ್‌ಗಳು

ಫೆಬ್ರವರಿ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಮಸ್ಯೆಯ ಸಮಸ್ಯೆ

ಒಬ್ಬ ತಾಯಿ ತನ್ನ ಸತ್ತ ಮಗುವನ್ನು ಬದುಕಿಸಿಕೊಡಲು ಬೇಡಿಕೊಂಡಾಗ, ಭಗವಾನ್ ಬುದ್ಧ 'ಸಾವಿಲ್ಲದ ಮನೆಯ ಸಾಸಿವೆ ತಾ' ಎಂದು ಹೇಳಿದ ಕಥೆ ನಾವೆಲ್ಲಾ ಕೇಳಿರಲು ಸಾಕು. ಆ ಕಥೆಯ ತಾತ್ಪರ್ಯವಿಷ್ಟೇ, ಹುಟ್ಟಿದವರೆಲ್ಲರೂ ಸಾಯುವುದು ನಿಶ್ಚಿತ. ಅದಕ್ಕಾಗಿ ದುಃಖ ಪಡುವ ಅಗತ್ಯವಿಲ್ಲ ಎಂದು. ಈಗ ಯಾರು ಮೃತಪಟ್ಟರು ಅಥವಾ ಸಾಯಲು ಹೊರಟಿದ್ದಾರೆ ? ಇದೇನು ಈಗ ನಾನು ಸಾವಿನ ವಿಷಯದ ಬಗ್ಗೆ ಮಾತನಾಡುತ್ತಿರುವೆ ಅಂತ ಅಂದುಕೊಂಡಿರಾ... ಇದೇ ನೋಡಿ ಸಮಸ್ಯೆ. ನಾವು ಸಾಮಾನ್ಯವಾಗಿ ವಾಸ್ತವವನ್ನು ಅಥವಾ ಸತ್ಯವನ್ನು ಎದುರಿಸುವುದರಿಂದ ವಿಮುಖರಾಗುವುದು ಅಥವಾ ಪಲಾಯನ ಮಾಡುವುದು ಅಲ್ಲವೇ? ಇರಲಿ, ಆ ಮೇಲಿನ ಗೌತಮ ಬುದ್ಧನ ಕಥೆಯನ್ನು ಇಂದಿನ ದಿನಮಾನಗಳಿಗನುಸಾರವಾಗಿ ಹೇಳುವುದಾದರೆ... ತನ್ನ ಮಕ್ಕಳು ಯಾವಾಗಲೂ ಮೊಬೈಲನಲ್ಲೇ ಕಾಲ ಕಳೆಯುತ್ತಾರೆ. ಇದೊಂದು ಸಮಸ್ಯೆಯಾಗಿದೆ. ಹೇಗಾದರೂ ಮಾಡಿ ಈ ಸಮಸ್ಯೆಯಿಂದ ಮಕ್ಕಳನ್ನು ಹೊರತರುವ ಉಪಾಯವನ್ನು ಹೇಳು ಎಂದು ಒಬ್ಬ ತಾಯಿ ಇಂದಿನ ಬುದ್ಧು ಗೂಗಲ್ ಗುರುವಿಗೋ ಅಥವಾ ಏಐಗೋ ಕೇಳಿದರೆ, ಅದರಿಂದ ಥಟ್ಟನೇ ಬರುವ ಉತ್ತರ 'ಸಮಸ್ಯೆ ಇಲ್ಲದ ಮನೆಯ ಸಾಮಾನು ತಾ' ಎಂದು.!!! ಎಲ್ಲರ ಮನೆಯ ದೋಸೆಗೂ ತೂತು ಎಂಬಂತೆ ಎಲ್ಲರ ಮನೆಯಲ್ಲಿ ಸಮಸ್ಯೆಗಳೇ ಸಮಸ್ಯೆಗಳು. ಹಾಗೆ ನೋಡಿದರೆ, ನಾವು ಸಮಸ್ಯೆಗಳಲ್ಲಿಯೇ ಹುಟ್ಟಿ, ಸಮಸ್ಯೆಗಳಲ್ಲಿಯೇ ಜೀವಿಸಿ, ಕೊನೆಗೆ ಸಮಸ್ಯೆಗಳೊಟ್ಟಿಗೇ ಸಾಯುವುದು. ಅಲ್ಲಲ್ಲಾ... ಬಹುಶಃ ನಾವು ಹುಟ್ಟುತ್ತೇವೆ ಎಂ...

ಗಳಗನಾಥರು...ಕನ್ನಡ ಕಾದಂಬರಿಯ ಯುಗಪುರುಷ

ಇಮೇಜ್
ಇಪ್ಪತ್ತೊಂದನೆಯ ಶತಮಾನದ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಮತ್ತು ಇತರ ತಂತ್ರಜ್ಞಾನಗಳ ಅವಿಷ್ಕಾರ ಹಾಗು ನಾವೀನ್ಯತೆಯ ತೀವ್ರಗತಿಯ ಸದ್ಬಳಕೆಯ ಇಂದಿನ ದಿನಗಳಲ್ಲಿ ಒಬ್ಬ ವ್ಯಕ್ತಿ ಏಕಕಾಲಕ್ಕೆ ಕನ್ನಡದಲ್ಲಿ ಕಥೆ-ಕಾದಂಬರಿಗಳು, ಪ್ರಬಂಧಗಳು, ಪೌರಾಣಿಕ ಗ್ರಂಥಗಳು, ಸತ್ಪುರುಷರ ಜೀವನ ಚರಿತ್ರೆಗಳು ಇತ್ಯಾದಿಗಳ ಲೇಖನ ಮತ್ತು ಮಾಸಪತ್ರಿಕೆಯ ಸಂಪಾದಕತ್ವ, ಮುದ್ರಣ ಮತ್ತು ಪ್ರಕಾಶನವಲ್ಲದೇ ಆ ಪುಸ್ತಕಗಳ ಮಾರಾಟದಂತಹ ಕನ್ನಡದ ತ್ರಿವಿಧ ಸೇವೆಯನ್ನು ಸ್ವಾರ್ಥರಹಿತವಾಗಿ ಮಾಡುತ್ತಿದ್ದರೆ ದಿನ ಬೆಳಗಾಗುವುದರಲ್ಲಿ ಸರ್ಕಾರ, ಮಠ ಮಾನ್ಯಗಳು, ವಿವಿಧ ಸಾಂಸ್ಕೃತಿಕ ಸಂಘ ಸಂಸ್ಥೆಗಳು, ಸುದ್ದಿ ಮಾಧ್ಯಮಗಳು ಮತ್ತು ಡಿಜಿಟಲ್ ಸಾಮಾಜಿಕ ಮಾಧ್ಯಮಗಳಲ್ಲಿ ಸಂದುವ ಪ್ರಚಾರ, ಪ್ರಶಸ್ತಿಗಳು, ಮಾನ್ಯತೆ ಮತ್ತು ಹಣ ಸಂಪಾದನೆ ಅಷ್ಟಿಷ್ಟಲ್ಲ. ಆದರೆ, ಈ ತರಹದ ಯಾವುದೇ ಸಾಧನಗಳು, ಸವಲತ್ತು ಮತ್ತು ಸಹಕಾರ ಪ್ರೋತ್ಸಾಹಗಳಿಲ್ಲದೇ, ಕನ್ನಡ ನಾಡು ನುಡಿಗಳಿಗೆ ಹೇಳಿಕೊಳ್ಳುವ ಯಾವ ಮಾನ್ಯತೆ, ರಾಜಾಶ್ರಯಗಳಿಲ್ಲದ, ಪೇಶ್ವೆಗಳ ಕಾಲದ ಮರಾಠಿ ಭಾಷೆಯ ಪ್ರಭಾವ ಬ್ರಿಟಿಷರ ಕಾಲದಲ್ಲೂ ಮುಂದುವರೆದ ಹತ್ತೊಂಬತ್ತನೇಯ ಶತಮಾನದ ಕೊನೆಯ ದಶಕ ಮತ್ತು ಇಪ್ಪತ್ತನೆಯ ಶತಮಾನದ ಪ್ರಾರಂಭದ ಎರಡು ದಶಕಗಳ ಕಾಲಘಟ್ಟದಲ್ಲಿ ಉತ್ತರ ಕರ್ನಾಟಕದ ಹಳ್ಳಿಗಾಡಿನಲ್ಲಿ ಕೇವಲ ಮುಲ್ಕಿ ಶಿಕ್ಷಣ ಹೊಂದಿದ ಶಾಲಾ ಶಿಕ್ಷಕನೊಬ್ಬ ಕನ್ನಡ ಸಾರಸ್ವತ ಲೋಕಕ್ಕೆ ಮಾಡಿದ ತಳಮಟ್ಟದ ಸೇ...