ಪೋಸ್ಟ್‌ಗಳು

ಸೆಪ್ಟೆಂಬರ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಪ್ಪು ನನ್ನದೇ...

ಮೊನ್ನೆ ಸೆಪ್ಟೆಂಬರ್ ತಿಂಗಳ ಐದನೇಯ ತಾರೀಖಿನಂದು ನನ್ನ ವಾಟ್ಸಾಪ್ ಇನ್ ಬಾಕ್ಸ್ ನಲ್ಲಿ ಶಿಕ್ಷಕರ ದಿನಾಚರಣೆಯ ಶುಭಾಶಯಗಳ ಸುರಿಮಳೆಯಾಯಿತು. ನಮ್ಮ ರಿಲಯನ್ಸ್ ಜೀಯೋದವರು ಟೆಲಿಕಾಂ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿಯಿಂದ ಫೋನ್ ಕಾಲ್ ಫ್ರೀ ಇದ್ದರೂ ಯಾರೊಬ್ಬರೂ ಫೋನ್ ಮಾಡಿ ಅಭಿನಂದನೆ ತಿಳಿಸುವ ಧೈರ್ಯಮಾಡಲಿಲ್ಲ. ಪ್ರಾಯಶಃ ಫೋನ್ ಮಾಡಿ ಮಾತನಾಡುವಷ್ಟು ಸಮಯ, ವ್ಯವಧಾನ ಯಾರಲ್ಲೂ ಇಲ್ಲ, ಇಲ್ಲವೇ ಮಾತಿನಲ್ಲಿ ಹೇಗೆ ಅಭಿನಂದನೆಗಳನ್ನು ತಿಳಿಸುವುದು ಎಂದು ಗೊತ್ತಿರಲಿಕ್ಕಿಲ್ಲ ಅಥವಾ ಯಾರೋ ತಯಾರಿಸಿ ಕಳಿಸಿದ ಡಿಜಿಟಲ್ ಫ್ಲೈಯರ್ ಅಥವಾ ಮೆಸೇಜನ್ನು ಫಾರ್ವರ್ಡ್ ಮಾಡುವುದು ಅತೀ ಸುಲಭ ಎಂದು ಅನಿಸಿರಬೇಕು. ಇಲ್ಲವೇ, ಈ ಮೊದಲು ನನ್ನಂಥ ಶಿಕ್ಷಕರಾರಿಗೋ ಫೋನ್ ಮಾಡಿ ಅಭಿನಂದನೆ ತಿಳಿಸಿದಾಗ ಆ ಶಿಕ್ಷಕ ಮಹಾಶಯ ಫೋನಿನಲ್ಲಿ ಇವರನ್ನು ಭಯಂಕರವಾಗಿ ಕೊರೆದಿರುವ ಸಾಧ್ಯತೆಯನ್ನು ತಳ್ಳಿಹಾಕವಂತಿಲ್ಲ. ಇರಲಿ, ಆಂತೂ ಆ ಶುಭಾಶಯ ಸಂದೇಶಗಳಲ್ಲಿ ಮಿಂದೆದ್ದು ಆ ಎಲ್ಲ ಮೆಸೇಜು ಕಳಿಸಿದವರಲ್ಲಿ ನನ್ನಂತೆಯೇ ಶಿಕ್ಷಕರಾಗಿದ್ದವರಿಗೆ ಪರತ ಅಭಿನಂದನಾ ಸಂದೇಶ ಮತ್ತು ಉಳಿದವರಿಗೆ ಎರಡೂ ಕೈ ಜೋಡಿಸಿ ನಮಸ್ಕರಿಸಿದ ಇಮೋಜಿ ಕಳಿಸಿ ನನ್ನ ಕೈ ಬಟ್ಟುಗಳು ಸೋತು ಹೋದವು. ಬಟ್ಟಿನ ಆ ದಣಿವನ್ನು ಆರಿಸಿಕೊಳ್ಳಲು ಒಂದು ವಾರ ಮೋಬೈಲ್ ಉಪವಾಸ ಮಾಡಬೇಕೆಂಬ ಹೋಮ ಫಿಜಿಯೋಥೆರಪಿ ಸಲಹೆ ನನ್ನ ಶ್ರೀಮತಿಯಿಂದ ಬಂತು. ಆದರೆ, ಇತ್ತೀಚಿನ ನಿವೃತ್ತಿಯ ಹೊಸತರಲ್ಲಿಯ ದಿನಗಳಲ್ಲಿ ಕಣ್ಣುಗಳು ಕೇಳಬೇಕಲ್ಲ, ...