ಪೋಸ್ಟ್‌ಗಳು

ಜೂನ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರಶ್ನೆ ಕೇಳುವುದು

ದೆಹಲಿ ಮೂಲದ ಸರ್ಕಾರೇತರ ಸಂಶೋಧನಾ ಸಂಸ್ಥೆಯಾದ ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ ಫೆಬ್ರವರಿ 13, 2026 ರವರೆಗೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಮತ್ತು ರಾಜ್ಯಸಭೆಯ ದಾಖಲೆಗಳು ಒದಗಿಸಿದ ದತ್ತಾಂಶದ ಪ್ರಕಾರ, ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ರಾಜ್ಯಸಭಾ ಸದಸ್ಯರೊಬ್ಬರು ತಮ್ಮ ಆರು ವರ್ಷಗಳ ಅವಧಿಯಲ್ಲಿ ಮೇಲ್ಮನೆಯಲ್ಲಿ ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ ಅಥವಾ ಯಾವುದೇ ಖಾಸಗಿ ಸದಸ್ಯರ ಮಸೂದೆಯನ್ನು ಪರಿಚಯಿಸಿಲ್ಲ, ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ಸಂಸದರು ಮಾಡುವ ಯಾವುದೇ 'ವಿಶೇಷ ಉಲ್ಲೇಖ'ಗಳು ಅವರ ಖಾತೆಯಲ್ಲಿ ಇಲ್ಲ ಎಂಬ ಪತ್ರಿಕಾ ವರದಿಯನ್ನು ತಾವೂ ಓದಿರಬಹುದು. ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸದಸ್ಯರು ತಮ್ಮ ವಿದ್ವತ್ತು, ಕಾರ್ಯಕ್ಷೇತ್ರ ಪರಿಣತಿಯ ವಿವಿಧ ದೃಷ್ಟಿಕೋನಗಳು ಮತ್ತು ಅನುಭವಗಳ ಮೂಲಕ ರಾಜ್ಯಸಭೆಯ ಚರ್ಚೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಚರ್ಚೆಗಳ ಗುಣಮಟ್ಟವನ್ನು ಹೆಚ್ಚಿಸಬಹುದು. ಹೀಗಿರುವಾಗ ಆ ರಾಜ್ಯ ಸಭೆಯ ನಾಮ ನಿರ್ದೇಶನ ಸದಸ್ಯರು ಯಾವ ಚರ್ಚೆಯಲ್ಲಿಯೂ ಭಾಗವಹಿಸದೇ, ತಮ್ಮ ಅನಿಸಿಕೆ ಅಭಿಪ್ರಾಯ/ಸಲಹೆಗಳನ್ನು ನೀಡದೇ, ಆರು ವರ್ಷಗಳಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳದೇ ಏನು ಕೊಡುಗೆ ಕೊಟ್ಟರು ಅಥವಾ ಕೊಡುಗೆ ಪಡೆದರು ಎಂಬುದನ್ನು ಆ ಭಗವಂತನೇ ಬಲ್ಲ. ಯಾಕೆಂದರೆ, ನಮ್ಮಲ್ಲಿ ಲೋಕಸಭೆಯಲ್ಲಿ ಪ್ರಶ್ನೆ ಕೇಳಲೂ ಹಣ ಪಡೆದ ಉದಾಹರಣೆಗಳೂ ಇವೆ.ಇರಲಿ, ಆ ಕೊಳಕು ರಾಜ...

ಸ್ಮಶಾನ ವೈರಾಗ್ಯ

ಸಮಾಜದಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ಸ್ಮಶಾನದಲ್ಲಿ ಊಟ, ಭಜನೆ, ವಾಸ್ತವ್ಯ ಮುಂತಾದ ಹೆಜ್ಜೆಗಳನ್ನು ಇಟ್ಟು, ಮೂಢನಂಬಿಕೆಯ ವಿರುದ್ಧ ಜನಜಾಗೃತಿ ಮಾಡಿಸುವ ಕೆಲಸವನ್ನು ಮಾಡಿದ ಮಂತ್ರಿ/ರಾಜಕಿಯ ಮುಖಂಡರ ಸುದ್ದಿಯನ್ನು ಕಳೆದ ಕೆಲವು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ತಾವೂ ಓದಿರಬಹುದು. ಅದು ಸಮಾಜದಲ್ಲಿನ ಮೂಡನಂಬಿಕೆಯನ್ನು ಎಷ್ಟು ಕಡಿಮೆ ಮಾಡಿತೋ ಗೊತ್ತಿಲ್ಲ, ಆದರೆ ಆ ಚಟುವಟಿಕೆ ಅಬಾಲವೃದ್ಧ, ಸ್ತ್ರೀ ಪುರುಷರೆನ್ನದೇ ಅನೇಕರಲ್ಲಿ ಸ್ಮಶಾನದ ಬಗ್ಗೆ ಇರುವ ಅವ್ಯಕ್ತ ಭಯವನ್ನು ನಿವಾರಿಸಲು ಸಹಕಾರಿ ಆಗಿರಲು ಸಾಕು. ನಮ್ಮ ಮನೆಯಿರವ ದೊಡ್ಡ ಬಡಾವಣೆಯ ದಕ್ಷಿಣ ಭಾಗದಲ್ಲಿ ಒಂದು ಸ್ಮಶಾನವಿದೆ. ಅನೇಕ ದಶಕಗಳ ಹಿಂದೆ ಆ ಸ್ಮಶಾನದ ಜಾಗ ಬಹಳ ವಿಸ್ತಾರವಿತ್ತಂತೆ. ಇಂದು ಅದು ನಮ್ಮ ಬಡಾವಣೆಯ ಒಂದು ಸಣ್ಣ ಭಾಗವಾಗಿದೆ. ಅದರ ಸುತ್ತಲೂ ಕಾಂಪೌಂಡ ಕಟ್ಟಲಾಗಿದ್ದು ಅದರ ಒಳಗೆ ಒಂದು ಬೋರವೆಲ್ ಹಾಕಿದ್ದು ನೀರಿನ ವ್ಯವಸ್ಥೆ ಮಾಡಲಾಗಿದೆ. ವಿವಿಧ ಬಗೆಯ ಮರಗಳು ಮತ್ತು ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಕಳೆಬರಹವನ್ನು ಸುಡಲು ನಾಲ್ಕಾರು ವಿಶಾಲ ಕಟ್ಟೆಗಳು ಮತ್ತು ಅವುಗಳ ಮೇಲೆ ವ್ಯವಸ್ಥಿತ ಚಿತಾಗಾರ ಸ್ಟಾಂಡಗಳನ್ನು ಮತ್ತು ಮಳೆಗಾಲದ ಅನುಕೂಲಕ್ಕೆಂದು ಎತ್ತರದ ತಗಡಿನ ಮೇಲ್ಚಾವಣಿಯ ವ್ಯವಸ್ಥೆಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಒಂದು ಮಹಾದೇವನ ಗುಡಿಯನ್ನೂ ಕಟ್ಟಲಾಗಿದೆ ಮತ್ತು ಸ್ಮಶಾನದ ಕಾಂಪೌಂಡಿನ ಸುತ್ತಲೂ ಬಡಾವಣೆಯ ರಸ್ತೆಗಳು,ಮನೆಗಳು ಬಂದಿವೆ. ಈ...