ಪೋಸ್ಟ್‌ಗಳು

ಜುಲೈ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರೊಫೆಷನಲ್ ಸಲಹೆ (ಸಮಾನತೆಯ ಸುಂಟರಗಾಳಿ )

ಎಂದಿನ ಮುಂಜಾನೆಯ ವಾಕಿಂಗ್ ಮುಗಿಸಿ ಬಂದು ಬೆಳಗಿನ ಜಾವ ತಲೆಯಲ್ಲಿ ಹೊಳೆದ ವಿಷಯದ ಮೇಲೆ ಒಂದು ಲೇಖನ ಬರೆಯುತ್ತಾ ಕೂತಿದ್ದೆ. ಎರಡನೇಯ ಕಪ್ಪು ಚಹಾ ಕುಡಿಯಲು ಮನಸ್ಸು ಬಯಸಿತು. ಅಡುಗೆ ಮನೆಗೆ ಹೋಗಿ ಶ್ರೀಮತಿಯ ಮೂಡು ಸರಿಯಾಗಿ ಇರುವುದನ್ನು ಖಾತ್ರಿ ಪಡಿಸಿಕೊಂಡು ಮೆಲ್ಲಗೆ ಒಂದು ಕಪ್ ಚಹಾದ ನಿವೇದನೆಯನ್ನು ಮಾಡಿದೆ. 'ಈಗ ನೀವು ನಿವೃತ್ತಿಯಾಗಿದ್ದೀರಿ, ಇನ್ನು ಮೇಲೆ ನೀವು ತಾಸೆರಡುತಾಸಿಗೊಂದು ಕಪ್ ಚಹಾ ಕುಡಿಯುವುದನ್ನು ಬಂದ ಮಾಡಿರಿ, ಆರೋಗ್ಯಕ್ಕೆ ಒಳ್ಳೆಯದಲ್ಲ, ಇನ್ನು ಮೇಲೆ ಏನಿದ್ದರೂ ಬೆಳಗ್ಗೆ ಒಂದು ಕಪ್ಪು ಮತ್ತು ಸಂಜೆಗೆ ಒಂದು ಕಪ್ಪು ಚಹಾ ಮಾತ್ರ' ಎಂದಳು ನನ್ನ ಶ್ರೀಮತಿ.  ನಾಲಿಗೆ ಚಹಾ ಕುಡಿಯಬೇಕೆಂದು ಬಯಸುತ್ತಿತ್ತಾದರೂ, ಹೆಂಡತಿಯ ಖಂಡತುಂಡ ಮಾತಿನಿಂದ ಸ್ವಲ್ಪ ನಿರಾಸೆ-ಹತಾಶೆಯಿಂದ ಮನಸ್ಸು ಘಾಸಿಗೊಂಡು ಉಪಾಯವಿಲ್ಲದೇ ಲೇಖನ ಬರೆಯಲು ಮುಂದಾದೆ..ಆದರೇ, ಲೇಖನ ಮುಂದೋಡಲಿಲ್ಲ‌. ತಿರುಗಿ ಅಡುಗೆಮನೆಗೆ ಹೋಗಿ 'ಇಲ್ಲಿಯವರೆಗೆ ನಿನ್ನ ಎಲ್ಲ ಸಣ್ಣ ದೊಡ್ಡ ಇಚ್ಚೆ, ಬಯಕೆ, ಆಸೆಗಳನ್ನು ಒಂದನ್ನೂ ಬಿಡದೇ ಪೂರೈಸಿರುವೆ. ಇಂದು ನಾನು ನೌಕರಿಯಿಂದ ನಿವೃತ್ತಿಯಾದರೇನಾಯಿತು, ಈಗಲೂ ನಾನೇ ಈ ಮನೆಯ ಯಜಮಾನ, ಇಂದು ನನ್ನ ಒಂದು ಸಣ್ಣ ನಿವೇದನೆಯನ್ನು ನೀನು ಪೂರೈಸುವುದಿಲ್ಲ ಎಂದು ಇಷ್ಟು ಕಠೋರವಾಗಿ ಹೇಳಲು ನಿನಗೆ ಹೇಗಾದರೂ ಮನಸ್ಸಾಯಿತು' ಎಂದು ನಾಲಿಗೆ ಹರಿಬಿಟ್ಟು ಆಕೆಯನ್ನು ದಬಾಯಿಸಬೇಕು ಎಂಬ ವಿಚಾರ ತಲೆಯಲ್ಲಿ ಬಂತಾದರೂ, ಮತ್ತೆ ...