ಪೋಸ್ಟ್‌ಗಳು

ಐಸ್ಕ್ರೀಮ್ ನ ಮಹಿಮೆ

ವಿದ್ಯಾಕಾಶಿ ಎಂದೇ ಹೆಸರುವಾಸಿಯಾದ ಧಾರವಾಡದಲ್ಲಿ ಮೂರು ವರ್ಷ ಬಿಎಸ್ಸೀ ನಂತರ ಒಂದು ವರ್ಷ ಬಿಎಡ್ ಪದವಿ ಪಡೆದು ನನಗೂ ನಮ್ಮ ತಾಯಿಯಂತೆ ಆದರ್ಶ ಶಿಕ್ಷಕಿಯಾಗುವ ಆಸೆ, ಆದರೆ ಅದೇ ತಾನೆ ಟಿಸಿಎಚ್ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ತಂದೆಯವರಿಗೆ ಒಂದು ಒಳ್ಳೆಯ ಮನೆತನ ನೋಡಿ ನನ್ನ ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳುವ ತವಕ. ಅಂತೂ ಮನೆಯ ಹತ್ತಿರದ ಒಂದು ಶಾಲೆಯಲ್ಲಿ ಪಾಠ ಮಾಡಲು ಪ್ರಾರಂಭಿಸಿದ ಕೆಲವೇ ತಿಂಗಳುಗಳಲ್ಲಿ ದೂರದ ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರ ಮನೆತನದ ಸಂಬಂಧವನ್ನು ತಂದೆಯವರು ಪ್ರಸ್ತಾಪಿಸಿದರು.ಅವರದು ದೊಡ್ಡ ಕೂಡು ಕುಟುಂಬ. ಮನೆಯ ಮಕ್ಕಳು ಸೊಸೆಯಂದಿರು ಕನಿಷ್ಠವೆಂದರೂ ಸ್ನಾತಕೊತ್ತರ ಪದವಿಧರರು.ವಿಶೇಷ ವೆಂದರೆ ಮೂರೂ ಗಂಡು ಮಕ್ಕಳು ಕ್ರಮವಾಗಿ ಡಿಗ್ರೀ ಕಾಲೇಜು /ಮೆಡಿಕಲ್ ಕಾಲೇಜು/ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರುಗಳು ಎಂದೆಲ್ಲಾ ವಿವರಿಸಿ ಶಿಫಾರಸ್ಸು ಮಾಡಿದರು.  ಅಂತೂ ನನ್ನ ಶಿಕ್ಷಕಿಯ ವೃತ್ತಿ ಕೆಲವೇ ತಿಂಗಳುಗಳಲ್ಲಿ ಸಮಾಪ್ತಿ ಹೊಂದಿ, ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕನೊಂದಿಗೆ ಮದುವೆಯಾಗಿ ಅತೀ ಬಿಸಿಲೂರು ಎಂಬ ಖ್ಯಾತಿಯ ಗುಲ್ಬರ್ಗಾ ಸೇರಿದೆ. ಮನೆಯ ಹಿರಿಯ ಸೊಸೆ, ನಗರದ ಪ್ರತಿಷ್ಠಿತ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ನಾನೂ ಅವರ ಶಾಲೆಯಲ್ಲಿ ಇಲ್ಲವೆ ಮನೆ ಸನಿಹದ ರೋಟರಿ ಸಂಸ್ಥೆಯ ಶಾಲೆಯಲ್ಲಿ ಟೀಚರ ಕೆಲಸ ಸೇರಿಕೊಂಡು ನನ್...

ವಾಟ್ಸ್ಯಾಪ್ ನ Good morning ಸಂದೇಶ

ಸ್ಮಾರ್ಟ್ ಫೋನ್ ಮತ್ತು ಅದರಲ್ಲಿ ವಾಟ್ಸ್ಯಾಪ್ ಬಂದಾಗಿನಿಂದ ದಿನಾಲೂ  ಬೆಳ್ಳಂಬೆಳಿಗ್ಗೆ ಶುಭ ಮುಂಜಾನೆ/Good morning ಸಂದೇಶಗಳು ಫೋನುಗಳಲ್ಲಿ ಹರಿದಾಡದಿದ್ದರೇ ಕೆಲವರಿಗೆ ತಮ್ಮ ಪ್ರಾತರ್ವಿಧಿಗಳು ಪೂರ್ಣ ಆಗುವ ಸಾಧ್ಯತೆ ಕಡಿಮೆ,ಇರಲಿ.  ಕೆಲವರು ಪ್ರತಿದಿನವೂ ತಪ್ಪದೇ ಹೊಸ ಹೊಸ ಸಂದೇಶಗಳನ್ನು ಸೃಷ್ಟಿಸಿ ಅಥವಾ ಇಂಟರ್ನೆಟ್ ನಲ್ಲಿ ಹೆಕ್ಕಿತೆಗೆದು ರವಾನಿಸಿದರೆ, ಇನ್ನೂ ಅನೇಕರು ತಮಗೆ ಫಾರ್ವರ್ಡ್ಆಗಿ ಬಂದ ಸಂದೇಶಗಳನ್ನು ಮರುಪ್ರಸಾರ ಮಾಡುವ ಅಭ್ಯಾಸವನ್ನು ರೂಡಿ ಮಾಡಿಕೊಂಡಿರುತ್ತಾರೆ.ಈ ಪ್ರವೃತ್ತಿಯು ಮೊದಮೊದಲು ವರ್ಗ,ವರ್ಣ,ಲಿಂಗ ಭೇದವಿಲ್ಲದೇ ಎಲ್ಲ ವಯೋಮಾನದವರಲ್ಲಿ ಕಂಡುಬಂದರೆ, ಝೆನ್ ಝೀ ವಿದ್ಯಾರ್ಥಿ/ಯುವ ಪೀಳಿಗೆಯಲ್ಲಿ ನಿಧಾನವಾಗಿ ಕ್ಷೀಣಿಸಿದಂತೆ ಕಾಣುತ್ತದೆ. ಆದರೇ, ಐವತ್ತಕ್ಕೂ ಮೇಲ್ಪಟ್ಟ ಪ್ರಭುಧ್ಧ ನಾಗರೀಕರಲ್ಲಿ ಅದರಲ್ಲಿಯೂ ನಿವೃತ್ತಿಯ ಆಸುಪಾಸಿನವರಲ್ಲಿ ಇದು ಇನ್ನೂ ಚಾಲ್ತಿಯಲ್ಲಿದ್ದಂತೆ ಕಾಣುತ್ತದೆ.ಈ ಟ್ರೆಂಡ್ ಅಥವಾ ಪ್ರವೃತ್ತಿಗೆ ಕಾರಣಗಳನ್ನು ವಿಶ್ಲೇಷಿಸಿದಾಗ ಕಂಡುಬಂದದ್ದೆಂದರೆ, ಯುವ ಪೀಳಿಗೆಯವರಲ್ಲಿನ ಸಮಯದ ಕೊರತೆ ಹಾಗೂ ಜೀವನಾನುಭವದ ಮಾತಿನ ಅನಗತ್ಯತೆಯ ಭಾವನೆಯಾದರೆ, ವಯಸ್ಕರಲ್ಲಿಯ ಇದರ ವ್ಯತಿರಿಕ್ತತೆ. ಅಲ್ಲದೇ ಇತ್ತೀಚಿಗೆ ನಾ ಕಂಡ ಕೆಲವು ವಾಟ್ಸ್ಯಾಪ್ ಯುನಿವರ್ಸಿಟಿಯಲ್ಲಿ ವಯಸ್ಕರಿಗಾಗಿ ಬಿತ್ತರವಾಗುವ ಸಲಹೆಗಳಲ್ಲೊಂದಾದ ... ದಿನಾಲೂ ಈ ತರಹದ ಗುಡ್ ಮಾರ್ನಿಂಗ್ ಸಂದೇಶ ತಪ್ಪದೇ ರವಾನಿಸುವುದು ತಮ್ಮ ...

ಶೇಂಗಾ ಚಿಕ್ಕಿ ...

ನಾನು ನೂತನ ವಿದ್ಯಾಲಯ ಹೈಸ್ಕೂಲಿನ ೮ನೇ ತರಗತಿಯಲ್ಲಿದ್ದಾಗ, ಬಿಂದುಮಾಧವ ಸರ್ ನಮಗೆ ವಿಜ್ಞಾನ ವಿಷಯವನ್ನು ಕಲಿಸುತ್ತಿದ್ದರು. ಅಂದು ಮಾಸ್ತರ್ ಜೀವಶಾಸ್ತ್ರದ ಪಾಠ ಮಾಡುತ್ತಾ ಸಸ್ಯ ಮತ್ತು ಪ್ರಾಣಿಗಳಲ್ಲಿಯ ದ್ವಿನಾಮ /ದ್ವಿಪದ ನಾಮಕರಣದ ವ್ಯವಸ್ಥೆಯನ್ನು ವಿಜ್ಞಾನಿ ಕ್ಯಾರೊಲಸ್ ಲಿನ್ನಿಯಸ್ ಪರಿಚಯಿಸಿದರು. ಈ ವ್ಯವಸ್ಥೆಯ ಪ್ರಕಾರ, ಪ್ರತಿಯೊಂದು ಜೀವಿಯು ನನ್ನ ಎರಡು ಹೆಸರುಗಳು - ಕುಲದ ಹೆಸರು ಮತ್ತು ಜಾತಿಯ ಹೆಸರು ಹೊಂದಿರುತ್ತದೆ.ಜೀವಿಗಳ ಕುಲದ ಹೆಸರು ಮತ್ತು ಜಾತಿಯ ಹೆಸರನ್ನು ಒಟ್ಟಿಗೆ ಬರೆಯಲಾಗಿ ಅದರ ವೈಜ್ಞಾನಿಕ ಹೆಸರು ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಮಾನವನಿಗೆ ಹೋಮೋ ಸೇಪಿಯನ್ಸ್ ಎಂದೂ ಜೇನುನೊಣಕ್ಕೆ ಅಪಿಸ್ ಮೆಲ್ಲಿಫೆರಾ ಎಂದು ದ್ವಿನಾಮ ನಾಮಕರಣ ಮಾಡಲಾಗಿದೆ  ಎಂದು ವಿವರಿಸಿದ್ದರು. ಮರುದಿನ, ನಮ್ಮ ಬಿಂದುಮಾಧವ ಮಾಸ್ತರು, ಭೌತಶಾಸ್ತ್ರದ ಯಾವುದೋ ಒಂದು ಪಾಠವನ್ನು ಹೇಳುತ್ತಿದ್ದರು. ಹಿಂದಿನ ಸಾಲಿನ ಕೊನೆಯ ಬೆಂಚಿನ ಕಾಯಂ ಗಿರಾಕೀಗಳಾದ ಕಿಟ್ಯಾ ಮತ್ತು ಮಲ್ಲ್ಯಾ(ಕೃಣಾರಾವ ಕುಲಕರ್ಣಿ ಮತ್ತು ಮಲ್ಲಿಕಾರ್ಜುನ ದೇವನೂರ) ಗುಸು ಗುಸು ಅಂತ ಮಾತನಾಡುತ್ತಿದ್ದರು. ಬಹಳ ಕಡಕ್ ಮಾಸ್ತರರು ಎಂದು ಖ್ಯಾತರಾದ ಬಿಂದುಮಾಧವ ಸರ್ ಅಂದೇಕೋ ಬಹಳ ಶಾಂತವಾಗಿ ಇಬ್ಬರಿಗೂ ತಮ್ಮ ಹತ್ತಿರ ಬರಲು ಆದೇಶಿಸಿದರು.ಇಬ್ಬರೂ ಸ್ವಲ್ಪ ಆಶ್ಚರ್ಯ ಹಾಗೂ ಗಾಬರಿ ಮಿಶ್ರಿತ ಮುಖಚರ್ಯೆಯಿಂದ ಮಾಸ್ತರ್ ಸನಿಹ ತಪ್ಪಿತಸ್ಥರ ಹಾಗೆ ಬಂದು ನಿಂತರು. ಮಾಸ್ತರರು, ಅ...

ಚಾಳೀಸ್ ದೇತೊ

ಬೆಳಗಾವಿಯ ಪ್ರತಿಷ್ಠಿತ ಜಿ.ಐ.ಟಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲನ ಪಾತ್ರದಲ್ಲಿ, ಶತಮಾನದ ಮಹಾಮಾರಿ ಕೋವಿಡ್ ನಂತರದ ದಿನಗಳಲ್ಲಿ, ಕಾರ್ಯನಿಮಿತ್ತ ಅನೇಕ ಸಲ ಬೆಂಗಳೂರು ಮತ್ತೂ ಇತರೆಡೆ ಪ್ರವಾಸಮಾಡುವ ಅನಿವಾರ್ಯತೆ ಇರುತಿತ್ತು. ಪ್ರತೀಸಲವೂ ನಮ್ಮ ಕಾಲೇಜಿನ ಕಾರಿನ ನಿಗದಿತ ಡ್ರೈವರ್ ನಮ್ಮ ಮನೆಯಿಂದ ರೈಲು/ವಿಮಾನ ನಿಲ್ದಾಣಕ್ಕೆ ಬಿಡುವ ಮತ್ತೂ ನಿಲ್ದಾಣದಿಂದ ಮನೆಗೆ ತಲುಪಿಸುವ ಕಾರ್ಯ ತಪ್ಪದೇ ವಿಧೇಯತೆಯಿಂದ ನಿರ್ವಹಿಸುತ್ತಿದ್ದ. ಅಂದು ರಾತ್ರಿ ೯ ಘಂಟೆಗೆ, ಹೊಸದಾಗಿ ಪ್ರಾರಂಭವಾದ ಬೆಳಗಾವಿ - ಬೆಂಗಳೂರು ಎಕ್ಸಪ್ರೆಸ್ ರೈಲುಗಾಡಿ ಹಿಡಿಯಲು ರೈಲ್ವೆ ಸ್ಟೇಶನ್ ಗೆ ಹೋಗುವದಿತ್ತು ಆದರೆ ಪ್ರತಿಸಾರಿ ಸ್ಟೇಶನ್ ಗೆ ಬಿಟ್ಟುಬರಲು ಬರುತ್ತಿದ್ದ ಕಾರಿನ ಡ್ರೈವರ್ ಸಂಜೆ ೮ ಘಂಟೆಗೆ ಫೋನ್ ಮಾಡಿ ತನ್ನ ಮಗನು ಸಂಜೆ ಆಟವಾಡುವಾಗ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದು ಅವನನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳಿರುವದಾಗಿ ಹಾಗೂ ತನ್ನ ಬದಲು ಬೇರೆ ಡ್ರೈವರ್ ನ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿರುವದಾಗಿ ತಿಳಿಸಿದನು. ಬದಲಿ ಡ್ರೈವರ್ ನ ವ್ಯವಸ್ಥೆ ಮಾಡುವುದನ್ನು ನಿಲ್ಲಿಸಿ ಮಗನ ಆರೈಕೆಯ ಕಡೆಗೆ ಗಮನಕೊಡೆಂದು ಹೇಳಿ ಫೋನ್ ಕೆಳಗಿಟ್ಟೆ. ನನ್ನ ಫೋನ್ ಸಂಭಾಷಣೆಯನ್ನು ಆಲಿಸಿದ ಮುದ್ದಿನ ಮಗಳು ಅದೇ ತಾನೆ ನಾವು ಖರೀದಿಸಿದ ಹೊಸ SUV ಕಾರಿನಲ್ಲಿ ನನ್ನನ್ನು ರೈಲು ನಿಲ್ದಾಣಕ್ಕೆ ಬಿಟ್ಟು ಬರಲು ತಯಾರಾದಳು. ನನ್ನ ಶ್ರೀಮತಿಯಾದರೋ ರಾತ್ರಿ ಹೊತ್ತು ಹೆಣ್ಣು...

ಸೆಪ್ಟೆಂಬರ್ ೨೯ ವಿಶ್ವ ಹೃದಯ ದಿನ.

ಇಮೇಜ್
  ನಮ್ಮ ಮನೆತನದ ಉದ್ಯೋಗ ಶಿಕ್ಷಣ (ಅಧ್ಯಯನ ಮತ್ತು ಅಧ್ಯಾಪನ) ಆದುದರಿಂದ ನಾನು ಚಿಕ್ಕವನಿದ್ದಾಗಿನಿಂದಲೂ ನಮ್ಮ ಮನೆಯಲ್ಲಿ ಎರಡೆರಡು(ಕನ್ನಡ ಮತ್ತು ಇಂಗ್ಲೀಷ್) ದಿನಪತ್ರಿಕೆಗಳು ಬರುತ್ತಿದ್ದವು. ಆಗ ನಮ್ಮೆಲ್ಲರ ಶಾಲಾ ಕಾಲೇಜುಗಳ ಸಮಯಗಳು ಬೇರೆ ಬೇರೆ ಇರುವ ಕಾರಣ ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ ನಾವೆಲ್ಲರೂ ಬೇರೆ ಬೇರೆ ಸಮಯದಲ್ಲಿ ಮಧ್ಯಾಹ್ನದ ಊಟ ಮತ್ತು ಎರಡೂ ಪತ್ರಿಕೆಗಳನ್ನು ತಿರುವಿ ಹಾಕುವ ದನ್ನು ಮಾಡುತ್ತಿದ್ದೆವು. ರಾತ್ರಿ ಊಟ ಮಾತ್ರ ಮನೆಯ ಎಲ್ಲ ಸದಸ್ಯರೂ ಒಟ್ಟಿಗೆ ಮಾಡುವ ಪದ್ಧತಿ ಇತ್ತು. ಆ ಸಮಯದಲ್ಲಿ ಅಂದಿನ ಪತ್ರಿಕೆಗಳಲ್ಲಿ ಪ್ರಕಟವಾದ ವಿವಿಧ ವಿಷಯಗಳ ಮೇಲೆ ಸಂವಾದ/ವಿಶ್ಲೇಷಣೆ ನಡೆಯುತ್ತಿತ್ತು ಮತ್ತು ಮನೆಯ ಎಲ್ಲ ಸದಸ್ಯರೂ ಭಾಗವಹಿಸುತ್ತಿದ್ದೆವು.ಹಾಗಾಗಿ ನನ್ನಲ್ಲಿ ಚಿಕ್ಕವನಿದ್ದಾಗಿನಿಂದಲೂ ವರ್ತಮಾನ ಪತ್ರಿಕೆಗಳನ್ನು ಓದುವ, ಜಗತ್ತಿನ ಆಗು ಹೋಗುಗಳ ಬಗ್ಗೆ ಅರಿಯುವ ಮತ್ತು ವಿಷಯಗಳನ್ನು ವಿಶ್ಲೇಷಿಸುವ ಹವ್ಯಾಸ ಬೆಳೆಯಿತು. ಮುಂದೆ ಕಾಲೇಜು ದಿನಗಳಲ್ಲಿ ಧೈರ್ಯದಿಂದ ಚರ್ಚಾ ಕೂಟ ಗಳಲ್ಲಿ ಭಾಗವಹಿಸಿ ಪ್ರಭಾವಿಯಾಗಿ ವಿಷಯಗಳ ಮಂಡನೆ ಮಾಡುವಲ್ಲಿಯೂ ಸಹಕಾರಿಯಾಯಿತು. ಈಗಿನ ದಿನಗಳಲ್ಲಿ ಇತರ ಆಧುನಿಕ ಸುದ್ದಿ ಮಾಧ್ಯಮಗಳ ಪ್ರಭಾವ ಹೆಚ್ಚಾಗಿದ್ದರೂ ಉದ್ಯೋಗದಿಂದ ನಿವೃತ್ತಿಯ ನಂತರ ನನ್ನ  ಪತ್ರಿಕೆಗಳ ಓದಿನ ಚಟ ಸ್ವಲ್ಪ ಜಾಸ್ತಿಯೇ ಆಗಿದೆ. ಇದಕ್ಕೆ ಸಾಮಾನ್ಯ ಕಾರಣ ನೌಕರಿಯ ಒತ್ತಡ,ಕಿರಿಕಿರಿ ಇಲ್ಲದ ಸಮಯ ಲಭ...

ಜಲಪೂರ್ಣ ತ್ರಯೋದಶಿಯಂದು ಗುರು ವಂದನೆ.

ಇಮೇಜ್
ಸುದೀರ್ಘ ೩೫ ವರ್ಷಗಳ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಆಗಿ ಶಿಕ್ಷಕ ವೃತ್ತಿಯಿಂದ ಇದೇ ಆಗಸ್ಟ್ ನಲ್ಲಿ ನಿವೃತ್ತಿ ಹೋಂದಿದಾಗ ಸಮಾಜಕ್ಕೆ ನೂರಾರು ಉಪಯುಕ್ತ ಇಂಜಿನಿಯರಗಳನ್ನು ಪೂರೈಸಿದ ಸಾರ್ಥಕತೆ ನನ್ನದಾಗಿತ್ತು. ಇನ್ನು ನಿವೃತ್ತಿಯ ಸಂತೃಪ್ತಿಯ ಜೀವನದ  ಸವಿಯನ್ನು ಸವಿಯುತ್ತಾ ಬಾಲ್ಯದಿಂದ ಇಲ್ಲಿಯವರೆಗೆ ನನ್ನ ಜೀವನ ಹೇಗೆ ವಿವಿಧ ಹಂತದಲ್ಲಿ ರೂಪಗೊಳ್ಳುತ್ತಾ ಬಂದಿತೆಂಬುದನ್ನು ಮೆಲುಕು ಹಾಕುತ್ತಾ ಹೋದಾಗ, ನನಗೆ ಮೊದಲು ಅನಿಸಿದ್ದು, ಜನ್ಮ ಮತ್ತು ಸಂಸ್ಕಾರ ನೀಡಿದ ತಾಯಿ ತಂದೆಯವರು,ವಿದ್ಯಾಬುದ್ಧಿ ಕಲಿಸಿದ ಶಾಲಾ ಶಿಕ್ಷಕರು ಹಾಗೂ ಬಾಲ್ಯದ ಒಳ್ಳೆಯ ಗೆಳೆಯರ ಗುಂಪು ಈ ಮೂರು ಜನರ ಪ್ರಭಾವ ಬಹಳ ಪ್ರಮುಖವಾದವುಗಳೆಂದು. ಹಲವು ವರ್ಷಗಳ ಹಿಂದೆ ತಾಯಿ ತಂದೆಯವರನ್ನು ಕಳೆದುಕೊಂಡಿರುವ ನನಗೆ ಈಗ ಇರುವ ಇನ್ನಿಬ್ಬರನ್ನು ಭೇಟಿಯಾಗಿ ನನ್ನ ಕೃತಜ್ಞತೆಗಳನ್ನು ಸಲ್ಲಿಸಬೇಕೆಂಬ ತುಡಿತ ಮನಸ್ಸಿನಲ್ಲಿ ಪ್ರಾರಂಭವಾಯಿತು. ನೌಕರಿಯ ಪಾಬಂಧಿ (ಬಂಧನ)ಯಿಂದ ಮುಕ್ತನಾದ ನಾನು ದೀಪಾವಳಿಗೆಂದು ಸಂಸಾರ ಸಮೇತನಾಗಿ ಕಲಬುರ್ಗಿಯ ಅಣ್ಣನ ಮನೆಗೆ ನಾಲ್ಕುದಿನ ಮೊದಲೇ ಬಂದಿಳಿದೆ.  ಊರು ಮುಟ್ಟಿದ ಮೇಲೆ ಮಾಡಿದ ಮೊದಲ ಕೆಲಸವೆಂದರೆ ನನ್ನಂತೆಯೇ ಶಿಕ್ಷಕರ ಮಕ್ಕಳಾದ ಮತ್ತು ಕಲಬುರ್ಗಿ ನಗರದಲ್ಲಿಯೇ ಶಿಕ್ಷಣ ಕ್ಷೇತ್ರದಲ್ಲಿ ನಿರತರಾದ ಹಾಗೂ ನೂತನ ವಿದ್ಯಾಲಯದಲ್ಲಿ ನನ್ನೊಂದಿಗೆ ಪ್ರಾಥಮಿಕ ದ...

ಇವಾ ಯಾವೂರವಾ...

  ಮೊನ್ನೆ ಆಕಾಶವಾಣಿಯಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ 1973 ರ "ಯಡಕಲ್ಲು ಗುಡ್ಡದ ಮೇಲೆ" ಚಲನಚಿತ್ರದ... ಯಾವೂರವಾ ಇವಾ ಯಾವೂರವಾ...ಹಾಡು ಪ್ರಸಾರ ವಾಗುತ್ತಿತ್ತು,ಅದನ್ನು ಕೇಳುತ್ತಾ ಮನಸ್ಸು ನನ್ನ ಬಾಲ್ಯದ ದಿನಗಳಲ್ಲಿ ತೇಲಿ ಹೋಯಿತು. ಮೂಲತಃ ಬೆಳಗಾವಿಯವರಾದ ನಮ್ಮ ತಂದೆ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಕಲಬುರ್ಗಿ ಸ್ನಾತಕೋತ್ತರ ಕೇಂದ್ರಕ್ಕೆ ನೇಮಕಗೊಂಡು ೧೯೭೦ ರಲ್ಲಿ ದೂರದ ಕಲಬುರ್ಗಿಗೆ ಬಂದು ನೆಲೆಸಿದ್ದರು. ಮನೆಯ ಐದು ಮಕ್ಕಳಲ್ಲಿ ಕಿರಿಯ ಮಗನಾದ ನನಗೆ ಆಗ ಸುಮಾರು ನಾಲ್ಕು ವರ್ಷ ವಯಸ್ಸು. ನೂತನ ವಿದ್ಯಾಲಯದ ಹಿಂದೆ /ಎಸ್.ಬಿ. ಕಾಲೇಜಿನ ಮೈದಾನದ ಮುಂದೆ  ತಲೆಎತ್ತಿದ ಸಂಗಮೇಶ್ವರ ನಗರ ಬಡಾವಣೆಯಲ್ಲಿ ಹೊಸದಾಗಿ ಕಟ್ಟಿದ ಮನೆಯ ವಾಸ್ತು ನಂತರದ ಪ್ರಥಮ ಬಾಡಗಿಯವರಾಗಿ ನಾವು ಬಂದು ನೆಲೆಸಿದೆವು. ಕಲಬುರ್ಗಿಯಲ್ಲಿ ಆಗ ಪ್ರಚಲಿತವಿದ್ದ ಪದ್ಧತಿಯ ಪ್ರಕಾರ ಪ್ರತೀ ೩ ವರ್ಷಕ್ಕೆ ಮನೆ ಮಾಲೀಕರು ಯಾವುದಾದರೂ ಒಂದು ಕ್ಷುಲ್ಲಕ ಕಾರಣ ನೀಡಿ ಬಾಡಿಗೆಯವರಿಂದ ಮನೆ ಖಾಲಿ ಮಾಡಿಸುತ್ತಿದ್ದರು. ಅದೇ ಪ್ರಕಾರ ಸಂಗಮೇಶ್ವರ ನಗರದಲ್ಲಿ ಎರಡು ಮನೆಗಳನ್ನು ಬದಲಾಯಿಸಿ ನಂತರ ಕೆ.ಯಿ.ಬಿ.ಯ ಹಿಂದೆ/ಫಾರೆಸ್ಟ್ ಆಫೀಸ ಎದುರಿನ ಭಾಗದಲ್ಲಿ ಮತ್ತೆರಡು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದೆವು. ಹತ್ತು ವರ್ಷದ ಬಾಡಿಗೆ ಮನೆಯ ಇರುವಿಕೆಯಲ್ಲಿ ನಾಲ್ಕು ಮನೆ ಮಾಲೀಕರ ವಿವಿಧ ಸಿಹಿಕಹಿ ಅನುಭವಗಳನ್ನು ಉಂಡ ನಮ್ಮ ತಂದೆತಾಯಿ  ಸ್ವಂತ ಮನೆಯನ್...

ಖಂಡೇ ನವಮಿಯ ಆಯುಧ ಪೂಜೆ

ನವರಾತ್ರಿಯ ಖಂಡೆ ನವಮಿ ಆಯುಧ ಪೂಜೆಯ ದಿನ. ಇಂದಿನ ದಿನ ಎಲ್ಲರೂ ತಮ್ಮ ತಮ್ಮ ಕಸುಬು, ಉದ್ಯೋಗದಲ್ಲಿ ಬಳಸುವ ವಿವಿಧ ಆಯುಧಗಳ ಪೂಜೆ ಮಾಡಿ ಅವುಗಳಿಗೆ ಗೌರವ ತೋರಿಸುವುದು ಒಂದು ಧಾರ್ಮಿಕ ವಾಡಿಕೆ. ನಮ್ಮ ಮನೆತನದ ಕಸುಬು ಶಿಕ್ಷಣ ಅಂದರೆ ಅಧ್ಯಯನ ಮತ್ತು ಅಧ್ಯಾಪನ. ನಮ್ಮ ತಂದೆಯವರು ಅಷ್ಟೇನು ಸಂಪ್ರದಾಯಸ್ಥರಲ್ಲ ಆದರೆ ನಮ್ಮ ತಾಯಿ ಧಾರ್ಮಿಕ ಸ್ವಭಾವದವಳು. ಹೀಗಾಗಿ ನಮ್ಮ ಮನೆಯಲ್ಲಿ ಯಾವುದೇ ಹಬ್ಬದ ದಿನದಂದು ತಂದೆಯವರಿಂದ ದೇವರ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿರಲಿಲ್ಲ ಆದರೆ ಅಮ್ಮ ಮಾತ್ರ ಚೆನ್ನಾಗಿ ವಿವಿಧ ಬಗೆಯ ಭಕ್ಷ್ಯಗಳನ್ನು ಮಾಡುತ್ತಿದ್ದರು. ಮಕ್ಕಳಲ್ಲಿ ಯಾರೋ ಒಬ್ಬರಿಂದ ಊಟಕ್ಕೂ ಮೊದಲು ದೇವರಿಗೆ ನೈವೇದ್ಯ ಮಾಡಿಸುತ್ತಿದ್ದರು ಮತ್ತು ಸಂದರ್ಭೋಚಿತ ಹಲವು ದಾಸರ ಪದಗಳನ್ನು ಹಾಡುತ್ತಿದ್ದರು. ಎಲ್ಲೆಡೆಯಂತೆ ನಮ್ಮ ಶಾಲೆಗೂ ವರ್ಷದಲ್ಲಿ ಎರಡು ಬಾರಿ ರಜಾದಿನಗಳು. ವರ್ಷವಿಡೀ ಓದಿ ವಾರ್ಷಿಕ ಪರೀಕ್ಷೆ ಬರೆದ ನಂತರ ಬೇಸಿಗೆಯ ರಜೆ. ಆ ಸಮಯದಲ್ಲಿ ನಮ್ಮ ಗೆಳೆಯರಲ್ಲಿ ಅನೇಕರು ಪ್ರವಾಸಕ್ಕೆಂದು ಬೇರೆ ಊರಿಗೆ ಹೋಗುವವರು ಇಲ್ಲ ದಿನವಿಡೀ ಮನೆಯ ಒಳಗೆ ಹೊರಗೆ ಆಟದಲ್ಲಿ ಸಮಯ ಕಳೆಯುತ್ತಿದ್ದರು. ನಮ್ಮದು ಐದು ಮಕ್ಕಳ ದೊಡ್ಡ ಕುಟುಂಬವಾದಕಾರಣ ಒಬ್ಬರಿಗೆ ರಜೆ ಇದ್ದರೆ ಇನ್ನೊಬ್ಬರಿಗೆ ಪರೀಕ್ಷೆಯ ಸಮಯ ಅಥವಾ ತಂದೆಯವರಿಗೆ ವಿಶ್ವವಿದ್ಯಾಲಯದ ಪರೀಕ್ಷೆ ನಡೆಸುವ ಜವಾಬ್ದಾರಿ. ಹೀಗಾಗಿ ಮನೆಯ ಎಲ್ಲರೂ ಬೇಸಿಗೆಯ ಪ್ರವಾಸ ಹೋದ ನೆನಪಿಲ್ಲ. ಹಾಗಂತ ಇತರರ ಮಕ್ಕಳ...