ಪೋಸ್ಟ್‌ಗಳು

ಸತ್ತ ಗುರು !!!

ಇಮೇಜ್
ನಮ್ಮ ಜಾತ್ಯಾತೀತ ದೂರದರ್ಶನದ ಚಂದನ ವಾಹಿನಿಯನ್ನು ನೋಡುತ್ತಿದ್ದವರಿಗೆ 1994 ರಲ್ಲಿ ಉದಯಾ ಟಿವಿ ಖಾಸಗಿ ಕೇಬಲ್ ವಾಹಿನಿ ಪ್ರಾರಂಭವಾದದ್ದು BSNL ನ ಲ್ಯಾಂಡಲೈನ ಫೋನಿನಿಂದ ಏಕ್ದಂ Jio ದ ಸಿಮ್ ಗೆ ಜಿಗಿದ ಅನುಭವವಾಗಿತ್ತು. ಉದಯಾ ಟಿವಿಯಲ್ಲಿ ಬಿತ್ತರವಾಗುತ್ತಿದ್ದ ಬಹುತೇಕ ಕಾರ್ಯಕ್ರಮಗಳು ವೀಕ್ಷಕರ ಮನಗೆದ್ದಿದ್ದವು. ರವಿವಾರ ಬೆಳಗ್ಗೆ ಪ್ರಸಾರವಾಗುತ್ತಿದ್ದ S K ಜೈನ ಅವರ ವಾರದ ಭವಿಷ್ಯ ಕಾರ್ಯಕ್ರಮ ಬಹಳೇ ಪ್ರಸಿದ್ಧಿ ಪಡೆದಿತ್ತು. ಮುಂದಿನ ವಾರದ ಗೋಚಾರದಲ್ಲಿ ಯಾವ ಗ್ರಹಗಳು ಯಾವ ರಾಶಿಯಲ್ಲಿ ಇರುತ್ತವೆ ಮತ್ತು ಅವುಗಳ ಪ್ರಭಾವ ಯಾವ ರಾಶಿಯವರಿಗೆ ಹೇಗಿರುತ್ತದೆ, ಯಾವ ರಾಶಿಯವರಿಗೆ ಶನಿಯ ಸಾಡೇಸಾತಿ ನಡೆದಿದೆ, ಮುಗಿದಿದೆ ಅಥವಾ ಸಾಡೆಸಾತಿ ಹಿಡಿಯುವುದಿದೆ, ಅದರಂತೆಯೇ ಗುರುವಿನ ಚಲನೆ ಹೇಗಿದೆ, ಯಾವ ರಾಶಿಯವರಿಗೆ ಗುರು ಉಚ್ಚವಾಗಿದೆ, ನೀಚವಾಗಿದೆ ಮತ್ತು ಯಾವ ರಾಶಿಯವರಿಗೆ ಗುರು ಅಸ್ತವಾಗಿದೆ ಇತ್ಯಾದಿಗಳನ್ನು ವಿವರಿಸುತ್ತಿದ್ದರು. ಆದರೆ, ನಾವು ಯಾರೂ ಆ ಉದಯಾ ಟಿವಿಯಲ್ಲಿಯ S K ಜೈನರ ವಾರದ ಭವಿಷ್ಯ ಕಾರ್ಯಕ್ರಮದಲ್ಲಿ ಗುರು ಸತ್ತ ವಿಚಾರ ಎಂದೂ ಕೇಳಿರಲಿಕ್ಕಿಲ್ಲ ಅಲ್ಲವೇ. ಆದರೆ ಹೋದ ವರ್ಷ(೦೧.೦೪.೨೦೨೪) ಏಕಾಏಕಿ ವಾಟ್ಸ್ಯಾಪ ಗುಂಪುಗಳನ್ನೂ ಮೊದಲು ಮಾಡಿಕೊಂಡು ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಗಡಿನಾಡು, ಕುಂದಾನಗರಿ ಬೆಳಗಾವಿಯ ಒಂದು ಅಂಗಡಿಯ 'ಸತ್ತಗುರು' ಎಂಬ ಬೋರ್ಡಿನ ಚಿತ್ರ ವೈರಲ್ ಆಗಿ ಹರಿದಾಡಿ ಸದ್ದು ...

ಅಲ್ಲಿದೆ ನಮ್ಮನೆ...

ಈ ಭೂಮಿಯ ಮೇಲೆ ಇಂದು ಇರುವವರಾರೂ ಸ್ವರ್ಗವನ್ನು, ಅಲ್ಲಿಯ ಸುಖ, ಸಮೃದ್ಧಿ, ಸಂತೋಷ, ಸಂಭ್ರಮ, ಸೌಲಭ್ಯ ಇತ್ಯಾದಿಗಳನ್ನು ಅಥವಾ ೫೬ ಸಖಿಯರ ಸ್ವಛಂದ ಸೇವಾಸುಖವನ್ನು ಆನಂದಿಸಿ ವಾಪಸ್ ಬಂದು ವಿವರಿಸಿದವರಿಲ್ಲ. ಆದರೂ, ಸ್ವರ್ಗದ ಬದುಕಿನ ಬಗ್ಗೆ ತಮ್ಮದೇ ಆದ ಕಲ್ಪನೆಗಳನ್ನು ವಿವಿಧ ಧಾರ್ಮಿಕ ಗ್ರಂಥಗಳನ್ನು ಓದಿ ಅಥವಾ ಕೇಳಿ ಅರಿಯದವರು ತೀರಾ ವಿರಳ.  ಅಂತಹದರಲ್ಲಿ ಪುಟಾಣಿ ಏಜೆಂಟ್ 123 ಸಿನಿಮಾದಲ್ಲಿ  'ಇಲ್ಲೇ ಸ್ವರ್ಗ ಇಲ್ಲೇ ನರಕಾ ಮೇಲೇನಿಲ್ಲ ಸುಳ್ಳು...'ಎಂದು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರು ಹಾಡಿನ ಮುಖಾಂತರ ಹೇಳಿರುವರು. ಅವರ ಮಾತುಗಳನ್ನು ಒಪ್ಪುವುದಾದರೆ, ಭೂಮಿಯ ಮೇಲಿನ ಸ್ವರ್ಗ ಎಂದು ನಮ್ಮಲ್ಲಿ ಬಹುತೇಕರು ಒಪ್ಪುವ ಸ್ಥಳ ಅಮೇರಿಕಾ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ ಅಲ್ಲವೇ?. ಮತ್ತೆ, ನಮ್ಮ ಶ್ರೀರಾಮಚಂದ್ರ 'ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ' ಎಂದು ಹೇಳಿದ್ದಾನಲ್ಲ ಎಂದರೆ, ಅಯ್ಯೋ ಬಿಡಿ ಅದು ತ್ರೇತಾಯುಗದಲ್ಲಿಯ ಮಾತು ಎಂದು ನೀವು ಮೂಗು ಮುರಿಯಬಹುದು, ಇಲ್ಲವೇ ಪ್ರಗತಿಪರ ಬುದ್ದಿ ಜೀವಿಗಳಾಗಿದ್ದರೆ ಶ್ರೀರಾಮ ಒಂದು ಕಾಲ್ಪನಿಕ ಪಾತ್ರವಷ್ಟೇ, ಅಲ್ಲದೇ ಅವನ ಮಾತಿಗೆ ಬೆಲೆ ಕೊಡುವುದು ನಮ್ಮ ಜಾತ್ಯಾತೀತ ಸಿದ್ಧಾಂತಕ್ಕೆ ವಿರುದ್ಧ ಎಂದೂ ಪ್ರತಿಪಾದಿಸಬಹುದು. ಅದು ಬಿಡಿ, ಅಂತರೀಕ್ಷದಿಂದ ಭಾರತ ಹೇಗೆ ಕಾಣಿಸುತ್ತದೆ ಎಂದು ನಾಲ್ಕು ದಶಕಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಪ್ರಶ್ನೆಗೆ ಉತ್ತರಿಸ...

ಕಿರಿ ಹಿರಿಯ ನಾಗರಿಕ

೧೯೮೦-೯೦ ರ ದಶಕದಲ್ಲಿ ದೂರದರ್ಶನದಲ್ಲಿ ಬರುತ್ತಿದ್ದ ಅಮೂಲ್ ಚಾಕೊಲೇಟ್ ನ ಹಿಂದಿ ಭಾಷೆಯ ಜಾಹೀರಾತೊಂದರಲ್ಲಿ ಮೋಪೆಡ್ ಮೇಲೆ ಕಾಲೇಜಿಗೆ ಹೋಗುತ್ತಿರುವ ಹುಡುಗ ಮತ್ತು ಹುಡುಗಿಯ ದೃಶ್ಯ ಸಂಭಾಷಣೆ ವಕ್ಕಣೆ ಹೀಗಿತ್ತು.  ಹುಡುಗ:"ಬೀತಗಯೆ ದಿನ್ ಸೈಕಲ್ ಕೇ ಅಭಿ ಆಯೇ ನಹಿ ದಿನ್ ಮೋಟರ್ ಕೇ" ಹುಡುಗಿ: "ತೋ ಫಿರ್ ಕ್ಯುಂವ್ ನಾ ಖಾಯೆ ಅಮೂಲ್ ಚಾಕ್ಲೇಟ್" ಟ್ಯಾಗ ಲೈನ್:" ಅಮೂಲ್ ಚಾಕ್ಲೇಟ್ ಪ್ಯಾರ್ ಕಿ ಮಿಠಿ ಭೇಟ" ಕಂಪನಿಯ ಅದೇ ತರಹದ ಇನ್ನೊಂದು ಜಾಹೀರಾತಿನಲ್ಲಿ ಒಬ್ಬ ಹುಡುಗಿ, ನಾನು ಬಲೂನ್ ಆಟ ಆಡುವುದಕ್ಕಿಂತ ದೊಡ್ಡವಳು ಆದರೆ ಕಾರ್ಟೂನ್ ನೋಡುವುದಕ್ಕಿನ್ನು ಚಿಕ್ಕವಳು ಎಂದು ಹೇಳಿದರೆ ಪಕ್ಕದಲ್ಲಿದ್ದ ಅವಳ ಅಣ್ಣ, ಆದರೆ ನೀನು ಅಮೂಲ್ ಚಾಕೊಲೇಟ್ ತಿನ್ನಲು ಸರಿ ವಯಸ್ಸಿನವಳು ಎಂದು ಹೇಳುವನು. ಅಮೂಲ್ ಕಂಪನಿಯು ದೇಶದ ದಿನನಿತ್ಯದ ಬದುಕಿನಲ್ಲಿನ ಆಗು ಹೋಗುಗಳನ್ನು ಆಧರಿಸಿ ಗ್ರಾಹಕರ ಮನಸ್ಸಿಗೆ ಸ್ಪಂದಿಸುವ ಜಾಹೀರಾತುಗಳನ್ನು ಸೃಷ್ಟಿಸುವ ಸೃಜನಶೀಲ ತಂಡ ಹೊಂದಿದೆ. ಅಮೂಲ್ ಕಂಪನಿಯವರೇನಾದರೂ ಹುಳಿ-ಸಿಹಿ ಮಿಶ್ರಿತ ಚಾಕೋಲೇಟ್ ತಯಾರಿಸುತ್ತಿದ್ದರೆ, ಅದರ ಜಾಹೀರಾತಿಗೆ ನನ್ನಂಥವರ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಒಂದು ಒಳ್ಳೆಯ ಟ್ಯಾಗ್ ಲೈನ್ ರಚಿಸಬಹುದು ಎಂಬುದು ಚಾಕೊಲೇಟ್ ನ ವ್ಯಾಪಾರ ಮತ್ತು ಜಾಹೀರಾತು ವಿಭಾಗಕ್ಕೆ ನನ್ನ ಒಂದು ಪುಕ್ಕಟೆ ಸಲಹೆ. ಹಾ಼, ನಾನೀಗ ಪುಕ್ಕಟೆ ಸಲಹೆ ನೀಡಲು ಪ್ರಾರಂಭಿಸಿರುವುದು ನನ್ನ ಪರಿ...

ಶ್ವಾನ ಮೋಹ

ಇಮೇಜ್
ಒಂದು ಸಾಕು ನಾಯಿಯನ್ನು ಬೈದುದ್ದಕ್ಕೆ ನಾಯಿಯ ಮಾಲೀಕ ಜರಿದವನ ಮೂಗು ಕತ್ತರಿಸಿದ ಸುದ್ದಿ ಮೊನ್ನೆ ಪತ್ರಿಕೆಯಲ್ಲಿ ಪ್ರಕಟವಾದದ್ದನ್ನು ಓದಿ ತ್ರೇತಾಯುಗದ ಶ್ರೀರಾಮಚಂದ್ರನ ವನವಾಸದ ಸಮಯದಲ್ಲಿ ಲಕ್ಷ್ಮಣನು ರಾವಣನ ತಂಗಿ ಶೂರ್ಪನಖಾಳ ಮೂಗು ಮತ್ತು ಕಿವಿ ಕತ್ತರಿಸಿದ ಪ್ರಸಂಗ ನೆನಪಿಗೆ ಬಂದಿತು. ಆದರೆ, ಅಂದು ಏಕಪತ್ನಿವ್ರತನಾದ ಮರ್ಯಾದಾ ಪುರುಷೋತ್ತಮ ಶ್ರೀರಾಮ, ಶೂರ್ಪನಖಾಳ ಎರಡನೆ ಮದುವೆಯ ಪ್ರಸ್ತಾವನೆಯನ್ನು ತಿರಸ್ಕರಿಸಿದಾಗ ಅವಳು ಸೀತಾಮಾತೆಯನ್ನು ಕೊಲ್ಲಲು ಮುಂದಾದಾಗ ಲಕ್ಷ್ಮಣ ಕೂಡಲೇ ಕಾರ್ಯತತ್ಪರನಾಗಿ ಶೂರ್ಪನಖಾಳ ಮೂಗು ಕತ್ತರಿಸಿದ್ದು ಸಮಂಜಸವಾದ ವಿಚಾರ. ಶೂರ್ಪನಖಾಳ ಮೂಗು ಕತ್ತರಿಸಿದ ಆ ವಿಷಯ ಬೆಳೆದು ಮುಂದೆ ರಾವಣನಿಂದ ಸೀತಾಮಾತೆಯ ಅಪಹರಣ, ನಂತರ ಅವನ ಸಂಹಾರಕ್ಕೆ ಕಾರಣವಾಯಿತು. ಆದರೆ, ಇಂದಿನ ಕಲಿಯುಗದಲ್ಲಿ ಮನುಷ್ಯರನ್ನಲ್ಲ ಕೇವಲ ಒಂದು ಸಾಕು ನಾಯಿಯನ್ನು ಮೂದಲಿಸದಕ್ಕೆ ಮೂಗು ಕತ್ತರಿಸಿಕೊಂಡ ವಿಚಾರ ಇನ್ನಾವ ರಾದ್ಧಾಂತಕ್ಕೆ ನಾಂದಿ ಹಾಡುವುದೋ ಆ ಭಗವಂತನೇ ಬಲ್ಲ.  ಗಣೇಶನ ಮದುವೆ ಸಿನೇಮಾದಲ್ಲಿ ವಠಾರದಲ್ಲಿ ಬಾಡಿಗೆದಾರನಾದ ಅನಂತನಾಗ್, ಮಾಲೀಕನ ಕಾಟ ತಾಳಲಾರದೇ ಒಂದು ಕಂತ್ರಿ ನಾಯಿಯನ್ನು ತಂದು ಕಟ್ಟಿ ಆ ನಾಯಿಗೆ  'ರಮಣ ಮೂರ್ತಿ' ಎಂದು ಮನೆ ಮಾಲಿಕನ ಹೆಸರಿಟ್ಟು ಅದಕ್ಕೆ ಬೈಯುವ ನೆಪದಲ್ಲಿ ಮನೆಮಾಲಿಕನಾದ ಮುಖ್ಯಮಂತ್ರಿ ಚಂದ್ರುಗೆ ಯದ್ವಾತದ್ವಾ ಬೈಯುವ ಪ್ರಸಂಗ ನಿಮಗೂ ನೆನಪಿರಬಹುದು. ಅದು ಕೇವಲ ಚಲನಚಿತ್ರದ ...

ಲೊಕೇಶನ್ ಕಳಿಸಿರಿ...

ಇಮೇಜ್
ಇಂದು ನನ್ನ ಬಾಲ್ಯದ ಗೆಳೆಯನೊಬ್ಬ ತನ್ನ ಮಗಳ ಮದುವೆಯ ಕರೆಯೋಲೆಯನ್ನು ವಾಟ್ಸ್ಆ್ಯಪನಲ್ಲಿ ಹಂಚಿಕೊಂಡು, ಮದುವೆ ಬೆಂಗಳೂರಿನಲ್ಲಿದ್ದು ಛತ್ರದ ಲೊಕೇಶನ್ ಕ್ಯುಆರ್ ಕೋಡನ್ನು ಡಿಜಿಟಲ್ ಕರೆಯೋಲೆ ಯಲ್ಲಿ ನಮೂದಿಸಿದೆ, ಮದುವೆಗೆ ತಪ್ಪದೇ ಬಂದು ವಧುವರರನ್ನು ಆಶೀರ್ವಾದಿಸಬೇಕೆಂದು ಆಗ್ರಹ ಪೂರ್ವಕವಾಗಿ ಫೋನಿನಲ್ಲಿ ಕರೆದ. ನನಗೆ, ಇಂದಿಗೆ ಮೂವತ್ತು ಮೂವತ್ತೈದು ವರ್ಷಗಳ ಹಿಂದಿನ ಮಾತೊಂದು ನೆನಪಾಯಿತು.  ಬಾಲ್ಯದ ಗೆಳೆಯರೆಲ್ಲ ಒಟ್ಟಿಗೆ ಓದಿ ಆಡಿ ಬೆಳೆದು ವಿವಿಧ ಉದ್ಯೋಗ/ವ್ಯವಸಾಯ ಅರಸಿ ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿ ಒಬ್ಬೊಬ್ಬರೇ ಮದುವೆ ಆಗುತ್ತಿದ್ದ ಸಮಯವದು. ಆದರೆ ಈ ಮಿತ್ರನಿಗೆ ಸ್ವಂತ ಊರಿನಲ್ಲಿಯೇ ಸರ್ಕಾರೀ ನೌಕರಿಸಿಕ್ಕು ಸಂಬಳದ ಜೊತೆಗೆ ಕೈತುಂಬಾ ಗಿಂಬಳವೂ ಬರುತ್ತಿದ್ದರೂ ಯಾಕೋ ಲಗ್ನದ ಯೋಗ ಮೂರ್ನಾಲ್ಕಾ ವರ್ಷವಾದರೂ ಬಂದಂತೆ ಕಾಣಲಿಲ್ಲ. ಈ ವಿಷಯವನ್ನು ಅರಿತ ನನ್ನ ಶ್ರೀಮತಿ, ತನ್ನ ಗೆಳತಿಯರಲ್ಲಿ ಒಬ್ಬಳಿಗೆ ಎಲ್ಲಿಯೂ ಯೋಗ್ಯ ವರ ಸಿಗದೇ ಅವಳ ತಂದೆ ಒದ್ದಾಡುತ್ತಿದ್ದ ವಿಚಾರ ತಿಳಿಸಿದಳು. ನಾನು ಉತ್ಸಾಹದಿಂದ ಧಾರವಾಡದ ಆ ಕಪಿ(ಕನ್ಯಾ ಪಿತೃ)ಗೆ ನನ್ನ ವರ ಮಿತ್ರನ ವಿಷಯ ತಿಳಿಸಿ ನಮ್ಮೂರಿನಲ್ಲಿನ ಅವನ ಮನೆಯ ಫೋನ್ (ಆಗಿನ್ನೂ  ಲ್ಯಾಂಡ್ ಲೈನ್ ಜಮಾನಾ) ನಂಬರ್ ನೀಡಿದೆ. ಮರುದಿನ ನನ್ನ ಶ್ರೀಮತಿ, ತನ್ನ ಗೆಳೆತಿಗೆ ಎಂಥಾ ವರ ಹೇಳಿದಿರಿ, ಅವಳ ತಂದೆಯವರು ಬಹಳ ಬೇಸರ ಮಾಡಿಕೊಂಡಿರುವದಾಗಿ ತಿಳಿಸಿದಳು. ನನ್ನ ಮಿ...

ಪರಾವಲಂಬಿ

ಚಿತ್ರ೧ ಚಿತ್ರ೨ ಮೊನ್ನೆ ಶ್ರೀ ವಾದಿರಾಜರು ಶ್ರೀಮದ್ ವ್ಯಾಸಮಹರ್ಷಿಗಳನ್ನು ಭಜಿಸಲು ರಚಿಸಿದ  ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ ... ಎಂಬ ಪದ ಕೇಳುತ್ತಿದ್ದೆ. ಅದರಲ್ಲಿ ಮುಂದೆ ಬರುವ ಒಂದು ಸಾಲು .... ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್‍ಸ್ವಾಮಿ ನೀನೆಂದು ತೋರಿಸಿದೆ... ಎಂದು ಬರುತ್ತದೆ. ಇಂದಿನ ಆಧುನಿಕತೆಯ ದಿನಗಳಲ್ಲಿ ಈ ಭಾಗದಲ್ಲಿ ಬರುವ  ಕ್ರಿಮಿಯಿಂದ ರಾಜ್ಯವಾಳಿಸಿದೆ ಎಂಬುದನ್ನು ಈ ಕೋವಿಡ್ ಬರುವುದಕ್ಕೂ ಮುನ್ನ ಮನವರಿಕೆ ಮಾಡಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸವಾಗಿತ್ತು. ಆದರೆ, ಈ ಶತಮಾನದ ಮಹಾಮಾರಿ ಕೋವಿಡ್ ನಿಂದಾಗಿ ಇಡೀ ಭೂಮಂಡಲವೇ ತಲ್ಲಣಿಸಿ ಹೋಯಿತು. ಇತ್ತೀಚಿನ ತಲೆಮಾರುಗಳು ಕಂಡೂ ಕೇಳರಿಯದ ಸಾವು-ನೋವು, ಕಷ್ಟ-ನಷ್ಟ, ದುಃಖ-ದುಮ್ಮಾನ, ಮಾನಸಿಕ ಖಿನ್ನತೆ-ಹತಾಶೆ, ವ್ಯಾಪಾರ-ವ್ಯವಹಾರಗಳ ಮಂದಗತಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಲಾಕ್ ಡೌನ್ ಮುಂತಾದ ಅನೇಕ ಋಣಾತ್ಮಕ ಪರಿಣಾಮಗಳನ್ನು ಜನ ಸಾಮಾನ್ಯರು ಅನುಭವಿಸಿದರು. ಜಾಗತಿಕವಾಗಿ ಆರ್ಥಿಕ ಪ್ರಗತಿಯಲ್ಲಿ ಕುಂಠಿತವಾಯಿತು. ಜಗತ್ತಿನ ಹಿಂದುಳಿದ-ಮುಂದುವರಿದ, ಬಡವ-ಶ್ರೀಮಂತ, ಹೀಗೆ ಭೇದವಿಲ್ಲದೇ ಎಲ್ಲ ಖಂಡಗಳ ಎಲ್ಲ ದೇಶಗಳ ಜನರು ಸಾವು ಬದುಕಿನೊಂದಿಗೆ ಹೋರಾಡುವಾಗ ಅವರನ್ನು ಹೇಗೆ ರಕ್ಷಿಸಬೇಕು ಎಂದು ತಿಳಿಯದೇ ದೇಶಗಳನ್ನು ಆಳುವವರು ಹತಾಶರಾದರು. ಇದೇ ನೋಡಿ ಆ ಕ್ರಿಮಿಯಿಂದ ರಾಜ್ಯವಾಳಿಸಿದೆ ಎಂಬ ಸಾಲುಗಳ ಅರ್ಥ ಎಂದು ಮನವರಿಕೆ ಆಯಿತು. ಇರ...