ಸ್ವಚ್ಛತೆಯವರು...
ನಾವು ಮಾಡುವ ಊಟ ಒಂದು ಯಜ್ಞವಿದ್ದಂತೆ, ಊಟ ಮಾಡುವಾಗ ಮಾತನಾಡಬಾರದು, ಮಾತು ಬೆಳೆದು ಕಲಹಕ್ಕೆ ಕಾರಣವಾದೀತು ಎಂದು ನಮ್ಮಮ್ಮ ಯಾವಾಗಲೂ ಹೇಳುತ್ತಿದ್ದರು. ಆ ಮಾತು ಇಷ್ಟು ವರ್ಷಗಳ ನಂತರ ಈಗ ಅಂದರೆ, ನನ್ನ ನಿವೃತ್ತಿಯ ನಂತರ ಬಹಳ ನೆನಪಾಗುತ್ತಿದೆ. ಅದಕ್ಕೆ ಇತ್ತೀಚೆಗೆ ನಿವಾಂತವಾಗಿ ಮನೆಯಲ್ಲಿ ಮಾತಾಡದೇ ಆದರೆ ರೇಡಿಯೋ ಹಚ್ಚಿ ಸಂಗಿತ ಕೇಳುತ್ತಾ ಊಟ ಮಾಡುವುದನ್ನು ಪ್ರಾರಂಭಿಸಿರುವುದು. ಈಗ ನನಗೆನೋ ಊಟ ರುಚಿಸುತ್ತಿದೆ ಆದರೆ, ಏಕೋ ನನ್ನ ಶ್ರೀಮತಿಗೆ ಅಷ್ಟು ರುಚಿಸುತ್ತಿಲ್ಲವಂತೆ. ನೀವು ಇದಕ್ಕೆ ಬೇರೆ ಅರ್ಥವನ್ನು ಕಲ್ಪಿಸುವುದಕ್ಕೂ ಮುನ್ನ ನಾನೇ ಹೇಳಿಬಿಡುತ್ತೇನೆ. ನಿಜ, ನೂರು ಪ್ರತಿಶತ ನಿಜ, ನಿವೃತ್ತಿಯ ನಂತರ ನಿಮ್ಮಂತೆ ನಾನೂ ನಳಪಾಕನಾಗಿರುವುದೇ ನನ್ನಾಕೆಗೆ ಊಟ ರುಚಿಸದೇ ಇರಲು ಕಾರಣವೇ ಹೊರತು ನೀವು ಊಹಿಸಿದಂತಲ್ಲ!!. ಈ ಮಾತನ್ನು ಅವಳ ಅನುಮತಿ ಪಡೆದೇ ನಿಮ್ಮೊಂದಿಗೆ ಹೇಳುತ್ತಿರುವುದು, ಇರಲಿ. ಇತ್ತೀಚೆಗೆ ನಮ್ಮ ಆಕಾಶವಾಣಿಯಲ್ಲಿ ಒಂದು ಮಹತ್ವದ ಜಾಹೀರಾತು ಮತ್ತೆ ಮತ್ತೆ ಬಿತ್ತರವಾಗುತ್ತಿದೆ. ಅಷ್ಟು ಮಹತ್ವದ ಜಾಹೀರಾತು ಯಾವುದೆಂದಿರಾ, ನಿಮಗೂ ಗೊತ್ತಿರುವ ವಿಷಯವೇ, ಅದೇ ಮನೆಯ ಸೆಪ್ಟಿಕ್ ಟ್ಯಾಂಕನಲ್ಲಿ ಶೇಖರವಾದ ಸ್ಲಜ್ಜನ್ನು ತಪ್ಪದೇ ಪ್ರತಿ ಮೂರು ವರ್ಷಕ್ಕೊಮ್ಮೆ ಖಾಲಿಮಾಡಿಸುವ ಅಗತ್ಯತೆಗಳನ್ನು ಹೇಳುವ ವಿಷಯ. ಇಲ್ಲದಿದ್ದರೆ ನಿಮ್ಮ ಮನೆಯ ಪೈಖಾನೆಯ(ಸಂಡಾಸದ) ಸೆಪ್ಟಿಕ್ ಟ್ಯಾಂಕ ತುಂಬಿ ಅಲ್ಲಿನ ಮಲಿನ ನೀರು ಹೊರಬಂದು ಮನೆಯ ಸುತ್ತ ಗಬ್ಬ...